ತುಮಕೂರು :ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಮತ್ತು ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಡಾ|| ಎಂ.ಆರ್.ಹುಲಿನಾಯ್ಕರ್ ಅವರ ಆತ್ಮಕಥನದ ಇಂಗ್ಲೀಷ್ ಆವೃತ್ತಿ ‘Reminiscences and Reflections’ ಅಕ್ಟೋಬರ್ 17ರಂದು ಮಧ್ಯಾಹ್ನ 2.15ಕ್ಕೆ ಶ್ರೀದೇವಿ ಶಿಕ್ಷಣ ಸಮುದಾಯ ಆವರಣದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಚಾರ್ಟೆರ್ಡ್ ಅಕೌಂಟೆಂಟ್ ಆರ್.ಸಿ.ಆಂಜಿನಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರಲ್ಲಿ ಕನ್ನಡದಲ್ಲಿ ಡಾ||ಎಂ.ಆರ್.ಹುಲಿನಾಯ್ಕರ್ ಅವರ ಆತ್ಮಕಥನ ಕನ್ನಡದಲ್ಲಿ ಲೋಕಾರ್ಪಣೆಗೊಂಡಿತ್ತು, ಕನ್ನಡದಲ್ಲಿ ಕಮಲೇಶ್ ರವರು ಬರೆದಿದ್ದು ಅದನ್ನು ಸ್ಥಳೀಯರು ಮಾತ್ರ ಓದುತ್ತಾರೆ ದೇಶ-ವಿದೇಶಗಳಲ್ಲಿ ನೆಲೆಸಿರುವ ಶ್ರೀದೇವಿ ಸಂಸ್ಥೆಯಲ್ಲಿ ಓದಿರುವ ಹಳೆಯ ವಿದ್ಯಾರ್ಥಿಗಳು,ಅಭಿಮಾನಿಗಳು ಓದಬೇಕೆಂಬ ಅಭಿಲಾಷೆಯನ್ನು ಇಟ್ಟುಕೊಂಡು ಇಂಗ್ಲೀಷ್ ನಲ್ಲಿ ತರ್ಜುಮೆ ಮಾಡಲಾಗಿದೆ, ವಿ.ಕೃಷ್ಣ ಅವರು ಬರೆದಿರುವ ಅನುವಾದದ ಕೃತಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.ಆತ್ಮಕಥನ ಬಿಡುಗಡೆ ಸಮಾರಂಭವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಉದ್ಘಾಟಿಸಲಿದ್ದು, ಪುಸ್ತಕವನ್ನು ಕಾನೂನು ಮತ್ತು ಸಂಸದೀಯ ಸಚಿವ ಹೆಚ್.ಕೆ.ಪಾಟೀಲರು ಬಿಡುಗಡೆ ಮಾಡಲಿದ್ದಾರೆ, ಮೊದಲ ಕೃತಿಯನ್ನು ಮಾಜಿ ರಾಜ್ಯಸಭಾ ಸದಸ್ಯ ಡಾ.ಪದ್ಮಶ್ರೀ ವಿಕಾಸ್ ಮಹಾತ್ಮೆ ಸ್ವೀಕರಿಸಲಿದ್ದಾರೆ, ಆತ್ಮಕಥನ ಕುರಿತು ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕರಾದ ಡಾ.ಸಿ.ನಾಗಣ್ಣ ಮಾತನಾಡಲಿದ್ದಾರೆ ಎಂದು ತಿಳಿಸಿದರು.ಮಾಜಿ ಸಂಸದ ಜಿ.ಎಸ್.ಬಸವರಾಜು ಅವರು ಶುಭ ನುಡಿಗಳನ್ನಾಡಲಿದ್ದು, ವಿಧಾನ ಪರಿಷತ್ ಸದಸ್ಯರಾದ ಎಫ್.ಎಚ್.ಜಕ್ಕಪ್ಪನವರು ಪುಸ್ತಕ ಅನುವಾದಕರಾದ ವಿ.ಕೃಷ್ಣ ಅವರನ್ನು ಸನ್ಮಾನಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ನಿವೃತ್ತ ಉಪಕುಲಪತಿ ಡಾ.ಬಿ.ತಿಮ್ಮೇಗೌಡ ಭಾಗವಹಿಸಲಿದ್ದು, ಲೋಕಸಭಾ ಸದಸ್ಯ ಗೋವಿಂದ ಎಂ.ಕಾರಜೋಳ ಅಧ್ಯಕ್ಷತೆ ವಹಿಸಲಿದ್ದು, ಡಾ.ಎಂ.ಆರ್.ಹುಲಿನಾಯ್ಕರ್ ಉಪಸ್ಥಿತರಿರುವರೆಂದು ತಿಳಿಸಿದರು.
ತುಮಕೂರು ವೀರಶೈವ ಸಹಕಾರ ಬ್ಯಾಂಕ್ ನ ಅಧ್ಯಕ್ಷರಾದ ಕೆ.ಜೆ.ರುದ್ರಪ್ಪನವರು ಮಾತನಾಡುತ್ತಾ ಡಾ||ಹುಲಿನಾಯ್ಕರ್ ರವರು ತಮ್ಮ ವೈದ್ಯವೃತ್ತಿ,ರಾಜಕೀಯ,ಸಾಮಾಜಿಕ,ಶೈಕ್ಷಣಿಕ,ಧಾರ್ಮಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ,ರೋಗಿಗಳಿಗೆ ಸಂಜೀವಿನಿಯಾಗಿದ್ದಾರೆ,ಬಡವರ ಬಂಧುವಾಗಿ ಎಲ್ಲಿಯೋ ಹುಟ್ಟಿ ತುಮಕೂರನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡು ಜಿಲ್ಲೆಯ ಜನತೆಗೆ ಕಲ್ಪತರುವಾಗಿದ್ದಾರೆ,ಕಾಮಧೇನುವಾಗಿದ್ದಾರೆ ಎಂದರು.
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಹೆಚ್.ಎಂ.ರವೀಶಯ್ಯನವರು ಮಾತನಾಡುತ್ತಾ ಡಾ||ಎಂ.ಆರ್.ಹುಲಿನಾಯ್ಕರ್ ರವರು ಜಿಲ್ಲೆಯ ಎಲ್ಲ ಜನರಿಗೆ ಚಿರಪರಿಚಿತರು ವೈದ್ಯರಾಗಿ,ವಿಧಾನಪರಿಷತ್ ಸದಸ್ಯರಾಗಿ ಶಿಕ್ಷಣ ತಜ್ಞರಾಗಿ,ಕೊಡುಗೈ ದಾನಿಗಳಾಗಿದ್ದಾರೆ ಅವರ ಸೇವೆ ಮತ್ತು ಕೊಡುಗೆಯನ್ನು ಜಿಲ್ಲೆಯ ಜನ ಪಡೆದಿದ್ದಾರೆ ಅವರನ್ನು ಜಿಲ್ಲೆಯ ಜನ ಪಡೆದಿರುವುದೇ ಪುಣ್ಯ ದಯಮಾಡಿ ಎಲ್ಲರೂ ಈ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಸಾರ್ವಜನಿಕರು,ಅಭಿಮಾನಿಗಳು,ಶಿಕ್ಷಣ ಪ್ರೇಮಿಗಳು,ಹಳೆಯ ವಿದ್ಯಾರ್ಥಿಗಳು,ಪೋಷಕರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತ ಡಾ||ಎಸ್.ನಾಗಣ್ಣ, ಮಧುಕರ್, ಸತೀಶ್, ಟಿ.ಜೆ.ಗಿರೀಶ್, ಸುರೇಶ್, ಸಿ.ಎನ್.ರಮೇಶ್,ಧನಿಯಾಕುಮಾರ್,ಮಂಜೇಶ್,ಆರ್.ಕುರಂದವಾಡ್,ಮಲ್ಲಿಕಾರ್ಜುನ್,ಮಡಿವಾಳ ಸಂಘದ ಶಾಂತಕುಮಾರ್, ಲಕ್ಷ್ಮೀ ನರಸಿಂಹರಾಜು, ಲಕ್ಮಣದಾಸ್, ಗೋವಿಂದರಾಜು, ಮಾಜಿ ಮೇಯರ್ ಕೃಷ್ಣಪ್ಪ, ರಮಣ್ ಹುಲಿನಾಯ್ಕರ್,ಲಾವಣ್ಯ,ಎಂ.ಎಸ್.ಪಾಟೀಲ್,ಮುಂತಾದವರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
