ತುಮಕೂರು:ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಸ್ಥಾಪಿಸಿ ರಚಿಸಿರುವ ಜ್ಞಾನವಿಕಾಸ ಕೇಂದ್ರಗಳಿಂದ ಸಂಘದ ಮಹಿಳಾ ಸದಸ್ಯರುಗಳ ಸಬಲೀಕರಣವಾಗುತ್ತಿದೆ,ಸದರಿ ಕೇಂದ್ರದಲ್ಲಿ ಕಾನೂನು,ಜ್ವಲಂತಸಮಸ್ಯೆಗಳು,ಆರೋಗ್ಯ,ಉದ್ಯೋಗ,ವ್ಯಾಪಾರ, ಸಾಂಸ್ಕೃತಿಕ,ಪ್ರವಾಸ,ಸೃಜನಶೀಲ ಕಾರ್ಯಕ್ರಮಗಳನ್ನುಆಯೋಜಿಸುವುದರಿಂದ ಮಹಿಳೆಯರಿಗೆ ಹೆಚ್ಚಿನ ಪ್ರಯೋಜನವಾಗುತ್ತಿದೆ,ಮಹಿಳಾ ಸಬಲೀಕರಣ ಅಂದರೆ ಪ್ರತಿ ಮಹಿಳೆ ಆರ್ಥಿಕವಾಗಿ,ಸಾಮಾಜಿಕವಾಗಿ ತನ್ನ ಕೌಶಲ್ಯಗಳಿಂದ ಗುರಿ ಸಾಧಿಸುವುದಾಗಿದೆ,ನಿರ್ಗತಿಕ ಮಹಿಳೆಯರಿಗೆ ಮಾಸಾಶನದ ಜೊತೆ ವಾತ್ಸಲ್ಯ ಯೋಜನೆಯಡಿ ಉತ್ತಮ ಮನೆಯನ್ನು ಉಚಿತವಾಗಿ ಶ್ರೀಧರ್ಮಸ್ಥಳ ಕ್ಷೇತ್ರದಿಂದ ಕಟ್ಟಿಕೊಡುತ್ತಿರುವುದು ನನಗೆ ಸಂತಸ ತಂದಿದೆ,

ಮಹಿಳೆಯರು ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಂಡು ತಾವು ಅಂದುಕೊಂಡ ಗುರಿಯನ್ನು ತಲುಪಬೇಕು ಆಗ ಮಾತ್ರ ಮಹಿಳಾ ಸಬಲೀಕರಣವಾಗುತ್ತದೆ,ಶ್ರೀಕ್ಷೇತ್ರದಿಂದ ರಾಜ್ಯದ ಸಂಘದ ಮಹಿಳೆಯರಿಗೆ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ಕ್ಷೇಮವನ ಮತ್ತು ಜ್ಞಾನವಿಕಾಸ ಯೂಟ್ಯೂಬ್ ಚಾನಲ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಶ್ರದ್ಧಾಅಮಿತ್ ರವರು ತಿಳಿಸಿದರು.
ಅವರು ಇಂದು ನಗರದ ಅಗ್ರಹಾರದಲ್ಲಿರುವ ಶ್ರೀಕೋಟೆ ಕೊಲ್ಲಾಪುರದಮ್ಮ ಸಮುದಾಯ ಭವನದಲ್ಲಿ ನಡೆದ ತಾಲ್ಲೋಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಹಗೂ ವಾತ್ಸಲ್ಯಮನೆ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ನೂರುನ್ನೀಸರವರು ಮಹಿಳಾ ಸಬಲೀಕರಣಕ್ಕೆ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ ಅಪಾರ,ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರಂತ್ರ್ಯ ಸಿಗಬೇಕು ಎಂದು ಪೂಜ್ಯ ಹೆಗ್ಗಡೆರವರು ಸ್ವಸಹಾಯ ಸಂಘಗಳನ್ನು ರಚಿಸಿ ಸಂಘದ ಸದಸ್ಯರುಗಳಿಗೆ ರಾಷ್ಟ್ರೀಕೃತ ಬ್ಯಾಂಕ್ ಗಳ ಮೂಲಕ ಸಾವಿರಾರು ಕೋಟಿ ರೂಪಾಯಿಗಳನ್ನು ಸಾಲವನ್ನು ನೀಡಿದ್ದಾರೆ
ಇದರಿಂದಕೋಟ್ಯಾಂತರಸಂಸಾರಗಳಿಗೆಅನುಕೂಲವಾಗಿದೆ,ಬಾಲಗರ್ಭಿಣಿ,ಬಾಲ್ಯವಿವಾಹಗಳನ್ನು ತಡೆಗಟ್ಟಲು ಎಲ್ಲರೂ ಕೈಜೋಡಿಸಬೇಕು,18ವರ್ಷದ ಪ್ರಾಯದೊಳಗಿನ ಮಕ್ಕಳಿಗೆ ಮೊಬೈಲ್ ನೀಡಬೇಡಿ,ಚಿಕ್ಕ ಚಿಕ್ಕ ವಿಚಾರಗಳಿಗೆ ಜಗಳವಾಡಿ ಡಿವೋರ್ಸ್ ಪಡೆಯುತ್ತಿದ್ದಾರೆ,ಹೆಣ್ಣು ಮಕ್ಕಳಿಗೆ ಸಂಸ್ಕಾರ ನೀಡಿ ಕಾಲಕಾಲಕ್ಕೆ ತಾಯಿಯಾದವರು ಮಕ್ಕಳಿಗೆ ತಿಳಿಹೇಳಬೇಕು,ಸಮಯಕ್ಕೆ ಆದ್ಯತೆ ನೀಡಿ ಕುಟುಂಬದ ಸದಸ್ಯರುಗಳ ಜೊತೆ ಸದಾ ಸ್ನೇಹದಿಂದ ಪ್ರೀತಿಯಿಂದ ಇದ್ದಾಗ ಎಲ್ಲವೂ ಚೆಂದವಾಗಿರುತ್ತದೆ ಎಂದು ಹೇಳಿದರು.
ಶ್ರೀಮತಿ ಅಂಬಿಕಾಹುಲಿನಾಯ್ಕರ್ ರವರು ಮಾತನಾಡುತ್ತಾ ಪೂಜ್ಯ ವೀರೇಂದ್ರಹೆಗ್ಗಡೆರವರ ಕುಟುಂಬ ಸಮಾಜಸೇವೆಗಾಗಿ ಮುಡಿಪಾಗಿದೆ,ಹೆಣ್ಣುಮಕ್ಕಳ ಶ್ರೇಯೋಭಿವೃದ್ಧಿಗೆ,ಸಮಾಜಕ್ಕೆ ಅಹರ್ನಿಷಿ ದುಡಿಯುತ್ತಿದ್ದಾರೆ ಅವರಿಗೆ ನಮ್ಮ ಜಿಲ್ಲೆಯ ಎಲ್ಲ ಹೆಣ್ಣುಮಕ್ಕಳ ಪರವಾಗಿ ಧನ್ಯವಾದಗಳು ಎಂದರು.
ಡಾ||ಮಂಗಳಗೌರಿ ಮತ್ತು ಡಾ||ಯಮುನಾ.ಬಿ.ಎನ್.ರವರು ಮಹಿಳೆಯರ ಪಾತ್ರದ ಬಗ್ಗೆ,ಆರೋಗ್ಯದ ಬಗ್ಗೆ ವಿಚಾರಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು,ವೇದಿಕೆಯಲ್ಲಿ ಸತೀಶ್ ಸುವರ್ಣ,ಪ್ರಭಾಕರ್,ಪಿ.ಬಿ.ಸಂದೇಶ್,ಕಾಮರಾಜು,ವಿಜಯಭಾಸ್ಕರ್,ಪ್ರೇಮಾಹೆಗ್ಗಡೆ ಮುಂತಾದವರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
