ತುಮಕೂರು:ಕುರುಕ್ಷೇತ್ರ ನಾಟಕದ ಪ್ರತಿಯೊಂದು ಮಾತುಗಳು,ಪ್ರತಿಯೊಂದು ಘಟನೆಗಳು ನಮ್ಮ ಕಣ್ಣಿಗೆ ಕಟ್ಟುವಂತಹದ್ದು ಅದರಲ್ಲೂ ಶ್ರೀಕೃಷ್ಣನು ಬೋಧಿಸಿದ ಭಗವದ್ಗೀತೆಯ ಪ್ರತಿಸಾಲುಗಳು ಉತ್ತಮ ಸಂಸ್ಕಾರಕ್ಕೆ ದಾರಿದೀಪ, ಆದರ್ಶ ಸಮಾಜಕ್ಕೆ ಭಗವದ್ಗೀತೆಯೇ ಮೂಲಮಂತ್ರ, ಮಕ್ಕಳು,ವಯೋವೃದ್ಧರು,ಮಹಿಳೆಯರು ಎಲ್ಲರೂ ಕೂತು ನಾಟಕ ವೀಕ್ಷಿಸಬೇಕು,ಅದರಂತೆ ನಾಟಕದಲ್ಲಿ ಬರುವ ಎಲ್ಲ ಮಾತುಗಳನ್ನು ಅನುಸರಿಸಬೇಕು ಎಂದು ಜಯನಗರ ನಾಗರೀಕ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಆರ್.ಎಸ್.ವೀರಪ್ಪದೇವರು ಹೇಳಿದರು.
ಅವರು ಇಂದು ಜಯನಗರ ನಾಗರೀಕ ಹಿತರಕ್ಷಣಾ ಸಮಿತಿಯಿಂದ ಕುರುಕ್ಷೇತ್ರ ನಾಟಕದ ಪಾತ್ರಧಾರಿಗಳಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಾಜಸೇವಕರಾದ ಎಸ್.ಪುಟ್ಟೀರಪ್ಪನವರು ಜಯನಗರದಲ್ಲಿ ಕಲಾಭಿಮಾನಿಗಳು,ಕಲಾಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದರಿಂದ ಕುರುಕ್ಷೇತ್ರ ನಾಟಕ ಉತ್ತಮ ಅಭಿನಯದಿಂದ ಮೂಡಿಬಂತು,ಬಡಾವಣೆಯ ಎಲ್ಲ ನಾಗರೀಕರು ನಾಟಕ ಮುಗಿಯುವವರೆಗೂ ಕುಳಿತು ಪಾತ್ರಧಾರಿಗಳಿಗೆ ಹುರಿದುಂಬಿಸುತ್ತಿದ್ದರು,ಪ್ರತಿ ಡೈಲಾಗೂ ಸಿಳ್ಳೆ,ಚಪ್ಪಾಳೆ ಹೊಡೆದು ನಾಟಕದ ಪಾತ್ರಧಾರಿಗಳಿಗೆ ಹುಮ್ಮಸ್ಸು ತುಂಬಿ ನಾಟಕ ಚೆನ್ನಾಗಿ ಮೂಡಿಬರಲು ಕಾರಣಕರ್ತರಾದರು,ಹಾಗೆಯೇ ಪಾತ್ರಧಾರಿಗಳು ಸಹ ಪ್ರತಿ ಪಾತ್ರಕ್ಕೆ ಜೀವ ತುಂಬಿದರು,ತುಮಕೂರು ಕಲೆಗಳ ತವರೂರು, ಗುಬ್ಬಿವೀರಣ್ಣ, ನರಸಿಂಹರಾಜು, ಶಕ್ತಿಪ್ರಸಾದ್,ಅರ್ಜುನ್ ಸರ್ಜ,ದಿ.ಮಂಜುಳ ಅವರಂತಹ ದಿಗ್ಗಜರನ್ನು ಕೊಟ್ಟ ಜಿಲ್ಲೆ,ಇಂದಿಗೂ ಜನ ನಾಟಕ ನೋಡುತ್ತಾರೆಂದರೆ ಅವರಲ್ಲಿ ಒಬ್ಬ ನಾಟಕದ ಹುಚ್ಚು ಎಷ್ಟಿದೆ ಎಂಬುದು ಗೊತ್ತಾಗುತ್ತದೆ,ಕುಟುಂಬದ ಎಲ್ಲ ಸದಸ್ಯರು ನಾಟಕಗಳನ್ನು ನೋಡಬೇಕು ಅದರಲ್ಲಿ ಬರುವ ಉತ್ತಮ ಪಾತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು,ಮಕ್ಕಳಿಗೂ ಸಹ ಭಗವದ್ಗೀತೆಯ ಶ್ಲೋಕಗಳನ್ನು ಹೇಳಿಕೊಡಬೇಕು,ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಟ್ಟಾಗ ಸಮಾಜ ಸಾಮರಸ್ಯದಿಂದ ಕೂಡಿರುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಪ್ರಕಾಶ್ ಭಾರಧ್ವಾಜ್, ಕೆ.ಆರ್.ಮಂಜುಳಾ, ಮಹದೇಪ್ಪ, ಬಿ.ವಿ.ದ್ವಾರಕನಾಥ್, ಎಸ್.ವೆಂಕಟೇಶ್,ಶಿವಣ್ಣ,ಜಯಕುಮಾರ್,ಬಸವರಾಜು,ಹನುಮಂತರಾಜು ಮುಂತಾದವರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
