ತುಮಕೂರು: ಮಧ್ಯಪ್ರಾಚ್ಯ ಯುದ್ಧದಿಂದ ವ್ಯಾಪಾರ ಮತ್ತು ಕೈಗಾರಿಕಾ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮಾರುಕಟ್ಟೆ ವ್ಯವಸ್ಥೆಯ ಮೇಲೆ ಗಂಭೀರ ಮಟ್ಟದಲ್ಲಿ ತಲ್ಲಣಗೊಳಿಸುತ್ತದೆ ಎಂದು ನೈರುತ್ಯ ರೈಲ್ವೆ ಸಲಹಾ ಸಮಿತಿ ಸದಸ್ಯರು ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಟಿ.ಜೆ.ಗಿರೀಶ್ ಕಳವಳ ವ್ಯಕ್ತಪಡಿಸಿದ್ದಾರೆ.
ಇದು ಮುಖ್ಯವಾಗಿ ಹಾರ್ಮುಜ್ ಜಲಸಂಧಿ ಮತ್ತು ಬಾಬ್ ಎಲ್-ಮಂಡೇಬ್ನಂತಹ ಪ್ರಮುಖ ಸಮುದ್ರ ಮಾರ್ಗಗಳ ಸಂಚಾರಕ್ಕೆ ಇದು ಅಡ್ಡಿಪಡಿಸುತ್ತಾ ಇದೆ. ಇದರಿಂದ ಹೆಚ್ಚಿನ ಸಾಗಣೆ ವೆಚ್ಚಗಳು, ವಿಳಂಬಗಳು ಮತ್ತು ಮರುಮಾರ್ಗದಿಂದ ಹೆಚ್ಚಿದ ಸರಕು ವೆಚ್ಚಗಳು ಹಾಗೂ ಇದರಿಂದ ಏರುತ್ತಿರುವ ತೈಲ ಬೆಲೆಗಳು ಉತ್ಪಾದನೆ ಮತ್ತು ಸಾರಿಗೆ ವೆಚ್ಚಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಹಣದುಬ್ಬರದ ಒತ್ತಡ, ಲಾಜಿಸ್ಟಿಕ್ಸ್ ವೆಚ್ಚಗಳು ಒಟ್ಟಾರೆ ಬೆಲೆಗಳನ್ನು ಹೆಚ್ಚಿಸಬಹುದು ಎಂದು ಹೇಳಿದ್ದಾರೆ.
ಇದರಿಂದ ಕಡಿಮೆಯಾಗುವ ಕೈಗಾರಿಕಾ ಉತ್ಪಾದನೆ ಮತ್ತು ವ್ಯಾಪಾರಗಳು ಹಾಗೂ ಮಾರುಕಟ್ಟೆಯಲ್ಲಿ ಒಟ್ಟಾರೆ ಹೆಚ್ಚಿದ ವೆಚ್ಚಗಳಿಂದಾಗಿ ಜಾಗತಿಕ ವ್ಯಾಪಾರ ಮತ್ತು ಉದ್ಯಮ ಬೆಳವಣಿಗೆಯಲ್ಲಿ ನಿಧಾನಗತಿ ಆಗುತಿದೆ. ಇದು ವ್ಯಾಪಾರ ಮತ್ತು ಕೈಗಾರಿಕಾ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಟಿ.ಜೆ.ಗಿರೀಶ್ ತಿಳಿಸಿದ್ದಾರೆ.
– ಕೆ.ಬಿ.ಚಂದ್ರಚೂಡ
