ತುಮಕೂರು: ನಗರದ ವಿದ್ಯಾವಾಹಿನಿ ಸಮೂಹ ಸಂಸ್ಥೆಯ ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ಟೆಕ್ನಾಲಜಿ ತನ್ನ ಮೊದಲ ಎಂ.ಬಿ.ಎ ಬ್ಯಾಚ್ (2025-27) ಅನ್ನು ವೈಸಿರಿ ಕ್ಯಾಂಪಸ್ನಲ್ಲಿ ಉದ್ಘಾಟಿಸಿತು. ಭವಿಷ್ಯಕ್ಕೆ ಸಿದ್ಧವಾಗಿರುವ ನಿರ್ವಹಣಾ ವೃತ್ತಿಪರರನ್ನು ರೂಪಿಸುವ ಸಂಸ್ಥೆಯ ಈ ಕಾರ್ಯಕ್ರಮವು ಮಹತ್ವದ ಮೈಲಿಗಲ್ಲು ಎಂದು ಗುರುತಿಸಲ್ಪಟ್ಟಿತು.
ವಿದ್ಯಾವಾಹಿನಿ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಕೆ.ಬಿ.ಜಯಣ್ಣರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕೈಗಾರಿಕಾ ಕ್ಷೇತ್ರದೊಂದಿಗೆ ದೃಢವಾದ ನಂಟಿನ ಅಗತ್ಯತೆಯನ್ನು ಉಲ್ಲೇಖಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೃತ್ತಿಜೀವನದ ಬೆಳವಣಿಗೆಗೆ ವಿದ್ಯಾವಾಹಿನಿ ಸಂಸ್ಥೆಯಿಂದ ಸಂಪೂರ್ಣ ಬೆಂಬಲ ದೊರೆಯುತ್ತದೆ ಎಂದು ಭರವಸೆ ನೀಡಿದರು.
ಈ ಕಾರ್ಯಕ್ರಮದ ಗೌರವಾನ್ವಿತ ಅಥಿತಿಗಳಾದ ವಿಟೆಕ್ ಸೆಲ್ಯೂಶನ್ ವ್ಯವಸ್ಥಾಪಕರಾದ ಶ್ರೀಮತಿ ಕೆ.ಜೆ.ನಾಗಪ್ರಿಯರವರು ವಿದ್ಯಾರ್ಥಿಗಳಿಗೆ “ವಿಶಿಷ್ಟ ಕಲಿಕಾ ವೇದಿಕೆಗಳನ್ನು ಸದ್ಬಳಕೆ ಮಾಡಿಕೊಳ್ಳಲು ಹಾಗೂ ಉದ್ಯಮತ್ವದ ಮಾರ್ಗಗಳನ್ನು ಅನ್ವೇಷಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು”.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಸುಬ್ರಹ್ಮಣ್ಯ ದೇಸಾಯಿ,ಕೋಫೌಂಡರ್ ಮತ್ತು ನಿರ್ದೇಶಕರು ಎನ್.ಸಿಂಥೆಸಿಸ್ ರವರು ವಿದ್ಯಾರ್ಥಿಗಳನ್ನು ಕುರಿತು “ವಿದ್ಯಾರ್ಥಿಗಳು ನಿರಂತರ ಕಲಿಕೆಯನ್ನು ಅಳವಡಿಸಿಕೊಳ್ಳಬೇಕು ಮತ್ತು ಮುಂದಿನ ಎರಡು ವರ್ಷಗಳನ್ನು ತಮ್ಮ ವೃತ್ತಿ ಭಾವಿ ನಿರ್ಮಾಣಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಲ್ಲಿ ವೃತ್ತಿಪರ ಕೋರ್ಸ್ಗಳ ಮಹತ್ವವನ್ನು ಬೆಳೆಸಿದರು.
ಈ ಸಂದರ್ಭದಲ್ಲಿ ಗಣ್ಯರಿಗೆ ಸ್ವಾಗತವನ್ನು ಕೋರಿದ ಎಂಬಿಎ ವಿಭಾಗದ ನಿರ್ದೇಶಕಾರದ ಡಾ.ಪ್ರಸನ್ನ ಕುಮಾರ್.ಟಿ.ಎಂ ಅವರು ಪ್ರಮುಖ ಕಲಿಕಾ ಉಪಕ್ರಮಗಳಾದ ಉದ್ಯಮಸಿದ್ಧತೆ, ಸಾಮಾಜಿಕ ನೈಪುಣ್ಯ, ನೇತೃತ್ವವೃದ್ಧಿ ಹಾಗೂ ಮಾರ್ಗದರ್ಶನ—ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ಮತ್ತು ಉದ್ಯಮ-ಸಂಬಂಧಿತ ನಿರ್ವಾಹಕರಾಗಿ ರೂಪಿಸಲು ನೆರವಾಗುತ್ತದೆ ಎಂದು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ಟೆಕ್ನಾಲಜಿಯ ಪ್ರಾಂಶುಪಾಲರದ ಅಮೂಲ್ಯ.ಜಿ, ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ

[…] […]