ತುಮಕೂರು: ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘಕ್ಕೆ ಕೈಗಾರಿಕೋಧ್ಯಮಿಗಳು ಹಾಗೂ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ. ಹೆಚ್.ಜಿ.ಚಂದ್ರಶೇಖರ್ ಅವರು ಸಂಪಾದಕರ ಕ್ಷೇಮಾಭಿವೃದ್ದಿ ನಿಧಿಗೆ 1ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.
ನಗರದ ಅವರ ಕಛೇರಿಯಲ್ಲಿ ಸಂಪಾದಕರ ಸಂಘದ ಪದಾಧಿಕಾರಿಗಳಿಗೆ ಒಂದು ಲಕ್ಷ ರೂ.ಗಳನ್ನು ನೀಡಿ, ಸಮಾಜದಲ್ಲಿ ಒತ್ತಡದಲ್ಲಿ ಕೆಲಸ ನಿರ್ವಹಿಸುವ ನಿಮ್ಮಗಳ ಆರೋಗ್ಯದ ಕಡೆ ಗಮನ ನೀಡಿ ಎಂದು ಹೇಳಿದರು. ಈ ದೇಣಿಗೆಯನ್ನು ನಿಮ್ಮ ಆರೋಗ್ಯ ಕ್ಷೇಮಾಭಿವೃದ್ದಿಗಾಗಿ ಬಳಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎಸ್.ಕೃಷ್ಣಮೂರ್ತಿ ಮಾತನಾಡಿ, ಈ ಹಣವನ್ನು ಸಂಪಾದಕರ ಕ್ಷೇಮಾಭಿವೃದ್ದಿ ಆರೋಗ್ಯ ನಿಧಿ ಎಂದು ಸ್ಥಾಪಿಸಿ ಸಂಘದ ಶ್ರೇಯೋಭಿವೃದ್ದಿಗೆ ಬಳಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಜಿ.ಕರುಣಾಕರ, ಜಿಲ್ಲಾ ಉಪಾಧ್ಯಕ್ಷ ಪಿ.ಎಸ್.ಮಲ್ಲಿಕಾರ್ಜುನಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎನ್.ಮಂಜುನಾಥಗೌಡ, ರಾಜ್ಯ ಜಂಟಿ ಸಹ ಕಾರ್ಯದರ್ಶಿ ರಂಗನಾಥ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿ.ಎನ್.ಮಹೇಶ್ ಕುಮಾರ್, ಅಕ್ಷಯ್ ಚೌದರಿ ಹಾಜರಿದ್ದು, ಕೈಗಾರಿಕೋಧ್ಯಮಿಗಳು ಹಾಗೂ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ. ಹೆಚ್.ಜಿ.ಚಂದ್ರಶೇಖರ್ ಅವರಿಗೆ ಸಂಘದಿಂದ ಕೃತಜ್ಞತೆ ಸಲ್ಲಿಸಿದರು.
ವರದಿ : ಕೆ ಬಿ ಚಂದ್ರಚೂಡ್
