ತುಮಕೂರು:ವಾಸನ್ ಐ ಕೇರ್ ತುಮಕೂರು ವತಿಯಿಂದ ತುಮಕೂರು ಜಿಲ್ಲಾ ಪೋಲೀಸ್,ಭಾರತೀಯ ಸೈನಿಕರು,ಅರೆ ಸೈನಿಕ ಸಿಬ್ಬಂದಿಗಳು ಮತ್ತು ಅವರ ಕುಟುಂಬದ ಸದಸ್ಯರುಗಳಿಗೆ ಡಿ.10 ರಿಂದ 30 ಜನವರಿ 2026ರವರೆಗೆ ಉಚಿತ ಕಣ್ಣಿನ ತಪಾಸಣೆ ನಡೆಸಲಾಗುವುದು ಇದು ಭಾರತದ ಎಲ್ಲ ವಾಸನ್ ಐ ಕೇರ್ ಸೆಂಟರ್ ನಲ್ಲಿ ನಡೆಯಲಿದೆ ಎಂದು ವಾಸನ್ ಐ ಕೇರ್ ಕೇಂದ್ರದ ಮಾರುಕಟ್ಟೆ ಮುಖ್ಯಸ್ಥರಾದ ಬಿ.ನಾಗೇಂದ್ರರವರು ತಿಳಿಸಿದರು.
ಅವರು ಇಂದು ನಗರದ ವಾಸನ್ ಐ ಕೇರ್ ಸೆಂಟರ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ “ಪೋಲೀಸ್ ಹಿರೋಸ್” ಎಂಬ ಕಾರ್ಯಕ್ರಮವನ್ನು ಪ್ರಪ್ರಥಮ ಬಾರಿಗೆ ಪರಿಚಯಿಸುತ್ತಿದ್ದೇವೆ,ಪೋಲೀಸರು,ನಿವೃತ್ತ ಪೋಲೀಸರು ಮತ್ತು ಭಾರತದ ಸೈನಿಕರು ನಮ್ಮ ದೇಶದ ಎರಡು ಕಣ್ಣುಗಳಿದ್ದಂತೆ ಅಂತಹ ವ್ಯಕ್ತಿಗಳ ಕಣ್ಣು ರಕ್ಷಣೆ ನಮ್ಮ ಹೊಣೆ,ಮಿಲಿಟರಿ,ಪ್ಯಾರಾ ಮಿಲಿಟರಿ,ಬಿಎಸ್.ಎಫ್,ಸಿ.ಆರ್.ಪಿ.ಎಫ್,ಇತರೆ ಭಾರತ ಸರ್ಕಾರದ ಎಲ್ಲಾ ಸೈನಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಲ್ಲರೂ ಈ ಶಿಬಿರದಲ್ಲಿ ಪಾಲ್ಗೊಂಡು ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಿ ಎಂದು ಪೋಲೀಸರು ಮತ್ತು ಸೈನಿಕರಲ್ಲಿ ಮನವಿ ಮಾಡಿದರು.

ತುಮಕೂರು ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ್ ರವರು ಮಾತನಾಡಿ ಕಣ್ಣುಗಳು ಮನುಷ್ಯರ ಮುಖ್ಯ ಅಂಗ ಪೋಲೀಸರು ಸದಾ ಕರ್ತವ್ಯನಿರತರಾಗಿರುತ್ತಾರೆ ವರ್ಷಕ್ಕೊಮ್ಮೆ ಕಣ್ಣುಗಳ ತಪಾಸಣೆ ಅವಶ್ಯಕ ಈ ನಿಟ್ಟಿನಲ್ಲಿ ವಾಸನ್ ಐ ಕೇರ್ ನವರು ಪೋಲೀಸರಿಗೆ ಉಚಿತ ಕಣ್ಣಿನ ತಪಾಸಣೆ ಮಾಡುತ್ತಿರುವುದು ಹೆಮ್ಮೆಯ ವಿಚಾರ,ದೃಷ್ಠಿಗೆ ಸಂಬಂಧಿಸಿದಂತೆ ಎಲ್ಲರೂ ಕಣ್ಣನ್ನು ಚೆನ್ನಾಗಿ ಕಾಪಾಡಿಕೊಳ್ಳಿ,ಸಾರ್ವಜನಿಕರಿಗೆ ವಾಸನ್ ಐ ಕೇರ್ ನವರು ಉತ್ತಮ ಸೇವೆ ಸಲ್ಲಿಸುತ್ತಿದೆ ಈಗ ನಮ್ಮ ಇಲಾಖೆಯ ಎಲ್ಲರಿಗೂ ಉಚಿತವಾಗಿ ಕಣ್ಣು ತಪಾಸಣೆ ಮಾಡುತ್ತಿದ್ದು ಎಲ್ಲರೂ ಕಣ್ಣನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ವಾಸನ್ ಐ ಕೇರ್ ನ ವೈದ್ಯರಾದ ಡಾ||ಶೃತಿ ಮಾತನಾಡುತ್ತಾ ಪೋಲೀಸರು ಮತ್ತು ಸೈನಿಕರಿಗೆ ಪೋಲೀಸ್ ಹಿರೋಸ್ ಎಂಬ ಕಾರ್ಯಕ್ರಮ ಮಾಡುತ್ತಿದ್ದು ಇದರಲ್ಲಿ ಉಚಿತ ಕಣ್ಣಿನ ತಪಾಸಣೆ ಮಾಡಲಾಗುತ್ತದೆ,ಕನ್ನಡಕಕ್ಕೆ ಶೇ 10 ರಿಯಾಯಿತಿ ಇರುತ್ತದೆ,ಡಯಾಗ್ನೋಸ್ಟಿಕ್ ಗೆ ಶೇ 15 ರಿಯಾಯಿತಿ ಇರುತ್ತದೆ,ತಪಾಸಣೆಗೆ ಬರುವಾಗ ತಮ್ಮ ಇಲಾಖೆಯ ಐಡಿ ಕಾರ್ಡ್ ತೆಗೆದುಕೊಂಡು ಬರುವುದು,ಆರೋಗ್ಯಭಾಗ್ಯ,ಯಶಸ್ವಿನಿ ಇತ್ಯಾದಿ ಸರ್ಕಾರಿ ಯೋಜನೆಗಳು ನಮ್ಮಲ್ಲಿ ಲಭ್ಯವಿದೆ,ಹೆಚ್ಚಿನ ಮಾಹಿತಿಗೆ ನಮ್ಮ ಮಾರ್ಕೆಟಿಂಗ್ ಮುಖ್ಯಸ್ಥರಾದ ಬಿ.ನಾಗೇಂದ್ರ ಮೊಬೈಲ್ 9036545223ನ್ನು ಸಂಪರ್ಕಿಸಿ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ||ಕೇಶವಮೂರ್ತಿ,ಡಾ||ಕೌಸರ್ ಮುಂತಾದವರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
