ತುಮಕೂರು:ಆಧುನಿಕ ದಿನಗಳಲ್ಲಿ ಆರೋಗ್ಯದ ಸಮಸ್ಯೆ ತುಂಬಾ ದೊಡ್ಡದಾಗಿದೆ ಇದರಿಂದ ವಿದ್ಯಾರ್ಥಿಗಳ ಯಶಸ್ಸಿಗೆ ಅಡೆತಡೆಯಾಗುತ್ತಿದೆ ಜೀವನದಲ್ಲಿ ಶ್ರೀಮಂತನಾದ ವ್ಯಕ್ತಿ ಅಂದರೆ ಅದು ಆರೋಗ್ಯವಂತ ವ್ಯಕ್ತಿ ಮಾತ್ರ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಆರೋಗ್ಯ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿಯ ವೈದ್ಯಾಧಿಕಾರಿಯಾದ ಡಾ||ವೀಣಾ ಎ.ಎಸ್ ಅಭಿಪ್ರಾಯಪಟ್ಟರು
ಅವರು ನಗರದ ಶ್ರೀ ಸಿದ್ಧಗಂಗಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ತುಮಕೂರು ಹೆಲ್ತ್ ಎಜುಕೇಶನ್ ಅಂಡ್ ಕೌನ್ಸಲಿಂಗ್ ಸೆಲ್ ಎನ್. ಎಸ್. ಎಸ್,ಎನ್.ಸಿ.ಸಿ, ರೆಡ್ ಕ್ರಾಸ್ ಘಟಕಗಳ ವತಿಯಿಂದ ಅ.13 ಮತ್ತು 14 ರಂದು ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು ಇತ್ತೀಚಿನ ಆಹಾರ ಕ್ರಮ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತಿದೆ ಆದ್ದರಿಂದ ತಿನ್ನುವ ಆಹಾರ ಸತ್ವಯುತವಾಗಿರಬೇಕು ಎಂದು ತಿಳಿಸಿದರು, ವಿದ್ಯಾರ್ಥಿಗಳು ರಕ್ತದಾನ ಮಾಡುವುದರಿಂದ ಹಲವಾರು ಜೀವಗಳನ್ನು ಉಳಿಸಬಹುದು ಆದ್ದರಿಂದ ವಿದ್ಯಾರ್ಥಿಗಳು ಸಕ್ರಿಯವಾಗಿ ರಕ್ತದಾನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ. ಬಿ.ನಿಜಲಿಂಗಪ್ಪನವರು ಮಾತನಾಡುತ್ತಾ ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಂತೆ ನಾವು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ನಾಲಿಗೆಯ ರುಚಿಗೆ ತಕ್ಕಂತೆ ಆಹಾರವನ್ನು ತಿನ್ನುವುದಕ್ಕಿಂತ ದೇಹಕ್ಕೆ ಎಂತಹ ಆಹಾರ ಬೇಕು ಅಂತಹ ಪೌಷ್ಟಿಕ ಆಹಾರವನ್ನು ಸೇವಿಸಲು ಉತ್ತಮ ಎಂದರು ವಿದ್ಯಾರ್ಥಿಗಳು ತಾವು ಆರೋಗ್ಯವಂತರಾಗಿ ತಮ್ಮ ಸುತ್ತಮುತ್ತಲಿನ ಜನರಿಗೂ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕು ಆಗ ಮಾತ್ರ ಸ್ವಸ್ಥ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಸಿದರು ರಕ್ತದಾನ ಮಹಾದಾನ ಆದ್ದರಿಂದ ಆರೋಗ್ಯವಂತ ಎಲ್ಲ ವಿದ್ಯಾರ್ಥಿಗಳು ರಕ್ತದಾನದಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದರು. ಎನ್.ಎಸ್.ಎಸ್ ಎನ್.ಸಿ.ಸಿ ಹಾಗೂ ರೆಡ್ ಕ್ರಾಸ್ ಸ್ವಯಂ ಸೇವಕರುಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು 120 ಯೂನಿಟ್ ರಕ್ತವನ್ನು ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರಾದ ಪ್ರೊ.ಎಚ್.ಜಿ.ಸರ್ವಮಂಗಳ, ಹೆಲ್ತ್ ಎಜುಕೇಶನ್ ಅಂಡ್ ಕೌನ್ಸಲಿಂಗ್ ಸೆಲ್ ನ ಸಂಚಾಲಕರಾದ ಡಾ.ರಂಗನಾಥ್.ಬಿ, ಸಹ ಸಂಚಾಲಕರಾದ ಶ್ರೀಮತಿ ಮುಜಿದಾ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ : ಚಂದ್ರಚೂಡ್
