ತುಮಕೂರು:ಧರ್ಮಸ್ಥಳದ ಧರ್ಮಾಧಿಕಾರಿ ಡಾ||ಡಿ.ವೀರೇಂದ್ರಹೆಗ್ಗಡೆರವರ ಧರ್ಮಪತ್ನಿ,ಜ್ಞಾನವಿಕಾಸ ಕೇಂದ್ರದ ರೂವಾರಿಗಳಾದ ಮಾತೃಶ್ರೀ ಶ್ರೀಮತಿ ಹೇಮಾವತಿ.ವಿ.ಹೆಗ್ಗಡೆರವರ ಹುಟ್ಟುಹಬ್ಬದ ಪ್ರಯುಕ್ತ ಇಂದು ತುಮಕೂರು ಗ್ರಾಮಾಂತರ ಯೋಜನಾ ಕಚೇರಿ ವ್ಯಾಪ್ತಿಯ ವಾತ್ಸಲ್ಯ ಫಲಾನುಭವಿ ಈರಮ್ಮರವರ ಮನೆಗೆ ತೆರಳಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ.ಎಂ ಹಾಗೂ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ಯೋಜನಾಧಿಕಾರಿಗಳಾದ ಸಂದೇಶ್.ಪಿ.ಬಿ ರವರುಗಳು ಹಿರಿಯ ಜೀವಿಯ ಆರೋಗ್ಯ,ಕುಶಲೋಪರಿಯನ್ನು ವಿಚಾರಿಸಿ ಹಣ್ಣು ಹಂಪಲು ನೀಡಿದರು.
ಒಟ್ಟು ತುಮಕೂರು ತಾಲೂಕಿನ 150 ಮಾಶಾಸನ ಪಡೆಯುತ್ತಿರುವ ಕುಟುಂಬಕ್ಕೆ ಯೋಜನೆಯ ಕಾರ್ಯಕರ್ತರು ಭೇಟಿ ನೀಡಿ ಹಣ್ಣುಹಂಪಲು ನೀಡಿ ಯೋಗ ಕ್ಷೇಮ ವಿಚಾರಿಸಿದರು ತುಮಕೂರು ತಾಲೂಕಿನಲ್ಲಿ ಒಟ್ಟು 150 ನಿರ್ಗತಿಕರಿಗೆ ಪ್ರತಿ ತಿಂಗಳು 1,50,000 ಮೊತ್ತ ಮಾಶಾಸನ ನೀಡಲಾಗುತ್ತಿದೆ.
ಈ ಸಂದರ್ಭದಲ್ಲಿ ತಾಲೂಕಿನ ಲೆಕ್ಕ ಪರಿಶೋಧಕರು, ಜ್ಞಾನವಿಕಾಸ ಸಮನ್ವಯಧಿಕಾರಿಯವರು ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
