ತುಮಕೂರು: ತುಮಕೂರು ಗ್ರಾಮಾಂತರ ಯೋಜನಾ ಕಚೇರಿ ವ್ಯಾಪ್ತಿಯ ಹಿರೇಗುಂಡಗಲ್ ಗ್ರಾಮದ ರೈತರು ಕೃಷಿ ಅಧ್ಯಯನ ಪ್ರವಾಸದ ಅಂಗವಾಗಿ ಬೆಂಗಳೂರಿನ ಜಿ.ಕೆ.ವಿ.ಕೆ.ಯಲ್ಲಿ ನಡೆದ ಕೃಷಿ ಮೇಳದಲ್ಲಿ ಭಾಗವಹಿಸಿದರು.
ಈ ವೇಳೆ ರೈತರು ಫಲ-ಪುಷ್ಪ ಬೆಳೆ, ಕೃಷಿ ಹಾಗೂ ನೀರಾವರಿ ವಿಧಾನಗಳು, ಸುಧಾರಿತ ಯಂತ್ರೋಪಕರಣಗಳ ಬಳಕೆ, ಪಾಲಿಹೌಸ್ನಲ್ಲಿ ತರಕಾರಿ ಬೆಳೆ ಬೆಳೆಸುವ ವಿಧಾನ, ಸಮಗ್ರ ಕೃಷಿ ಪದ್ಧತಿ ಮತ್ತು ವಿವಿಧ ಬೆಳೆಗಳ ಹೊಸ ತಳಿಗಳ ಬಗ್ಗೆ ತಜ್ಞರಿಂದ ಮಾಹಿತಿ ಪಡೆದರು.
ಪ್ರದರ್ಶನದಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಯಿಂದ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ನೂತನ ಕ್ರಮಗಳನ್ನೂ ರೈತರು ನೇರವಾಗಿ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿ.ಸಿ. ಟ್ರಸ್ಟ್) ನ ಕೃಷಿ ಮೇಲ್ವಿಚಾರಕ ರಾಘವೇಂದ್ರ ಎನ್. ಹಾಗೂ ಯೋಜನೆಯ ಸಿಬ್ಬಂದಿ ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
