ತುಮಕೂರು:ಮನಸ್ಸು ಇದ್ದರೆ ಮಾರ್ಗ ಎಂಬಂತೆ, ಸಾಧನೆಗೆ ಹಲವಾರು ದಾರಿಗಳಿವೆ.ಸಾಧಿಸುವ ಛಲ ಇದ್ದರೆ ಭಾಷೆ, ಬಡತನ,ಅಂಗವೈಕಲ್ಯ, ವಯಸ್ಸು ಯಾವುದು ಅಡ್ಡಿಯಾಗಲಾರದು. ಇದನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಮನಗಾಣಬೇಕು ಎಂದು ಸಿದ್ದಗಂಗಾ ವಿದ್ಯಾಸಂಸ್ಥೆಗಳ ಸಿಇಓ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಜಯವಿಭವಸ್ವಾಮಿ ತಿಳಿಸಿದ್ದಾರೆ.
ನಗರದ ಶ್ರೀಸಿದ್ದಗಂಗಾ ಮಹಿಳಾ ಪದವಿಪೂರ್ವಕಾಲೇಜಿನ ಸಂಸ್ಕೃತಿ-2025-26ನೇ ಸಾಲಿನ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡುತಿದ್ದ ಅವರು,ಕನ್ನಡ ಮಾಧ್ಯಮದಲ್ಲಿ ಓದುತ್ತಾ,ಕ್ರೀಡೆ ಮತ್ತು ಸಾಂಸ್ಕೃತಿಕ ವಿಷಯಗಳಲ್ಲಿ ಮುಂದಿದ್ದು, ವಿದ್ಯೆಯಲ್ಲಿ ಹಿಂದುಳಿದಿದ್ದ ನಾನು ಸಿಕ್ಕ ಅವಕಾಶ ಬಳಸಿಕೊಂಡು ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿ, ನಂತರ ಕೆ.ಎ.ಎಸ್, ಐಎಎಸ್ ಅಧಿಕಾರಿಯಾಗಿ ಕೆಲಸ ಮಾಡುವ ಅವಕಾಶ ದೊರೆಯಿತು.ನನಗೆ ಒದಗಿದ ಯಾವುದೇ ಅವಕಾಶಗಳನ್ನು ನಿರ್ಲಕ್ಷ ಮಾಡಿಲ್ಲ. ನೀವು ಕೂಡ ನಿಮಗೆ ದೊರೆಯುವ ಯಾವ ಅವಕಾಶಗಳನ್ನು ನಿರ್ಲಕ್ಷಿಸಬೇಡಿ ಎಂದು ಸಲಹೆ ನೀಡಿದರು.
ಸಿದ್ದಗಂಗಾ ಪಿಯು ಕಾಲೇಜುಗಳ ಸಂಯೋಜನಾಧಿಕಾರಿ ಪ್ರೊ,ರೇಣುಕಪ್ಪ ಮಾತನಾಡಿ,ಕಳೆದ 25 ವರ್ಷಗಳಿಂದ ಸಂಸ್ಕೃತಿ ಕಾರ್ಯಕ್ರಮ ಪಿಯು ವಿದ್ಯಾರ್ಥಿಗಳ ಪಾಲಿಕೆ ಒಳ್ಳೆಯ ವೇದಿಕೆಯಾಗಿದೆ. ನಿರಂತರವಾಗಿಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ.ಇತ್ತೀಚಿನ ದಿನಗಳಲ್ಲಿ ವಿದ್ಯಾವಂತ ಸಂಖ್ಯೆ ಹೆಚ್ಚುತ್ತಿದೆ.ಆದರೆ ಸಂಸ್ಕಾರವಂತರ ಸಂಖ್ಯೆ ಕ್ಷೀಣಿಸುತ್ತಿದೆ. ಇದಕ್ಕೆ ದೇಶದಲ್ಲಿ ವೃದ್ದಾಶ್ರಮಗಳು ಹೆಚ್ಚಾಗುತ್ತಿರುವುದೇ ಸಾಕ್ಷಿ.ಹಿರಿಯರಿಂದ ಕಲಿಯುವಂತಹದ್ದು ಸಾಕಷ್ಟು ಇದೆ.ನಿಮ್ಮ ಇಂದಿನ ಸ್ಥಿತಿಗೆ ನಿಮ್ಮ ತಂದೆ, ತಾಯಿಗಳ ತ್ಯಾಗವೇ ಕಾರಣ. ಈ ನಿಟ್ಟಿನಲ್ಲಿ ಯುವಜನರು ಆಲೋಚಿಸಬೇಕಿದೆ ಎಂದರು.
ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಸಿದ್ದಗಂಗಾ ಪಿಯುಕಾಲೇಜಿನ ಪ್ರಾಂಶುಪಾಲರಾದ ಪಿ.ಚಂದ್ರಶೇಖರ್ ಮಾತನಾಡಿ,ಶ್ರದ್ದೆ ಮತ್ತು ಸತತ ಪರಿಶ್ರಮದಿಂದಎನನ್ನು ಬೇಕಾದರೂ ಸಾಧಿಸಬಹುದುಎಂಬುದಕ್ಕೆ ಈ ವೇದಿಕೆ ಮೇಲಿರುವ ಗಣ್ಯರು ಸಾಕ್ಷಿಯಾಗಿದ್ದಾರೆ.ವಿದ್ಯೆ ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಿದೆ.ಈ ವರ್ಷ ಕಾಲೇಜಿನಲ್ಲಿ ಪ್ರಾಯೋಗಿಕವಾಗಿ ನೀಟ್ ಮತ್ತು ಜೆಇಇ ಕೋಚಿಂಗ್ ನೀಡಲಾಗುತ್ತಿದ್ದು, ಮುಂದಿನ ವರ್ಷದಿಂದ ಪೂರ್ಣಾವಧಿಗೆ ದೊರೆಯಲಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀಸಿದ್ದಗಂಗಾ ಮಠದಕಿರಿಯ ಶ್ರೀಗಳಾದ ಶ್ರೀಶಿವಸಿದ್ದೇಶ್ವರ ಮಹಾಸ್ವಾಮೀಜಿ ಆಶೀರ್ವಚನ ನೀಡಿ,ಬದುಕಿಗೆ ವಿದ್ಯೆಯಜೊತೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಇದ್ದಾಗ ಬದುಕು ಪರಿಪೂರ್ಣವಾಗುತ್ತದೆ.ವಿಜ್ಞಾನಿಯಾಗಿರುವ ಶ್ರೀಮತಿ ಉಮಾ.ಬಿ.ಆರ್. ಅವರು ನಮ್ಮ ಕಾಲೇಜಿನ ಹಳೆಯ ವಿದ್ಯಾರ್ಥಿ ಎಂಬುದು ಹೆಮ್ಮೆಯ ವಿಚಾರ.ಅವರ ಪ್ರತಿ ಮಾತುಗಳು ನಿಮಗೆ ಸ್ಪೂರ್ತಿಯಾಗಬೇಕು.ಸಾಧನೆಗೆ ವಯಸ್ಸಿನ ಅಡ್ಡಿಯಿಲ್ಲ ಎಂಬುದನ್ನು ಅವರ ಮಾತುಗಳು ನಿರೂಪಿಸಿವೆ.ಹಾಗಾಗಿ ಸಿಕ್ಕ ಸಣ್ಣ ಅವಕಾಶವೂ ನಿಮ್ಮ ಬದುಕನ್ನು ರೂಪಿಸುತ್ತದೆ.ಯಾವುದನ್ನು ನಿರ್ಲಕ್ಷಿಸಬೇಡಿ ಎಂದು ಸಲಹೆ ನೀಡಿದರು.
ಕಿರುತೆರೆ ನಟಿ ಶ್ರೀಮತಿ ಶೃತಿಕುಶಾಲ್,ಗಾಯಕಿ ಲಕ್ಷ್ಮೀವಿಜಯ್ ಅವರುಗಳು ವಿದ್ಯಾರ್ಥಿಗಳ ಕುರಿತು ಮಾತನಾಡಿದರು. ಶ್ರೀಮತಿ ಸುಷ್ಮಾ ಬಂಗಾರಶೆಟ್ರ, ಬಸವರಾಜು.ಆರ್.ಸಿ, ಜೈತ್ರಎಸ್., ಪುಷ್ಪಎಲ್.ಕೆ, ಚೈತ್ರ.ಎಂ., ತನುಜ.ಬಿ.ಆರ್., ಚಂದನ.ಎಸ್, ರವೀಶ್.ಹೆಚ್.ಬಿ., ದುರ್ಗಂಕವಿತ ಮತ್ತಿತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ

[…] ಇದನ್ನು ಓದಿ: ತುಮಕೂರು: ಮನಸ್ಸು ಇದ್ದರೆ ಮಾರ್ಗ,ಛಲ ಇದ್ದರ… […]