ತುಮಕೂರು: ತಾಲ್ಲೂಕಿನ ನೀಡವಳಲು ಪಂಚಾಯತ್ ಕಾರ್ಯಾಲಯದ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಲಾಯಿತು.ಈ ಕಟ್ಟಡದ ಸಭಾಭವನವನ್ನು ನಿರ್ಮಿಸಲು ದೇಣಿಗೆ ನೀಡಿ ಸಹಕಾರ ನೀಡಿದ್ದ ಸಾಮಾಜಿಕ, ಶೈಕ್ಷಣಿಕ ಮತ್ತು ಪರಿಸರ ಅಭಿವೃದ್ಧಿ ಸಂಘ (ರಿ) ನ ಅಧ್ಯಕ್ಷರು ಮತ್ತು ನಿವೃತ್ತ ಶಿಕ್ಷಕರುಗಳಾದ ಪುಟ್ಟರಂಗಯ್ಯ.ಆರ್. ಅವರ ಧರ್ಮಪತ್ನಿ ಶ್ರೀಮತಿ ಅಂಬಿಕಮ್ಮ.ಸಿ.ಎನ್.ಮತ್ತು ಅವರ ಪುತ್ರ ಡಾ.ರಕ್ಷಿತ್.ಎನ್.ಪಿ. ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಿಡುವಳಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹನುಮಂತರಾಯಪ್ಪ, ಉಪಾಧ್ಯಕ್ಷರಾದ ಶ್ರೀಮತಿ ಚಂದ್ರಕಲಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀನಿವಾಸರವರು, ಎಲ್ಲ ಗ್ರಾಮ ಪಂಚಾಯತ್ ಸದಸ್ಯರು, ಅಧಿಕಾರಿ ವರ್ಗದವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
