ತುಮಕೂರು:70ನೇ ಕನ್ನಡರಾಜ್ಯೋತ್ಸವದ ಅಂಗವಾಗಿ ಐಕ್ಯ ಫೌಂಡೇಶನ್ ಹಾಗೂ ಇನ್ನರ್ ವೀಲ್ ಸಂಸ್ಥೆ ಸಹಯೋಗದಲ್ಲಿ ಬುಧವಾರ ಸಂಜೆ ನಗರದಲ್ಲಿ ಹಮ್ಮಿಕೊಂಡಿದ್ದ ಕನ್ನಡಕ್ಕಾಗಿ ನಡಿಗೆ ಕಾರ್ಯಕ್ರಮದಲ್ಲಿ ಕನ್ನಡ ಬಾವುಟ ಬಣ್ಣದ ಉಡುಪುತೊಟ್ಟಿದ್ದ ನೂರಾರು ಮಹಿಳೆಯರು ನಡಿಗೆ ನಡೆದು ಸಾರ್ವಜನಿಕರ ಗಮನ ಸೆಳೆದರು.
ಸಿದ್ಧಗಂಗಾ ಆಸ್ಪತ್ರೆ ಬಳಿಯಿಂದ ಆರಂಭವಾದ ಕನ್ನಡಕ್ಕಾಗಿ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಅವರು, ಮಹಿಳೆಯರೇ ಸೇರಿ ವಿಭಿನ್ನವಾಗಿ ಆಕರ್ಷಣೀಯವಾಗಿ ಕನ್ನಡಕಾರ್ಯಕ್ರಮ ಆಚರಿಸಿದ್ದಾರೆ.ಕನ್ನಡ ನಾಡುನುಡಿ ಬಗ್ಗೆ ಜನರಲ್ಲಿ ಅರಿವೂ ಮೂಡಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಲೇಖಕಿ ಬಾ.ಹ.ರಮಾಕುಮಾರಿ ಮಾತನಾಡಿ, ಮಹಿಳೆಯರೇ ಸೇರಿಕೊಂಡು ಕ್ರಿಯಾಶೀಲವಾಗಿ ಕನ್ನಡ ಹಬ್ಬಆಚರಿಸುತ್ತಿದ್ದಾರೆ. ಈ ಆಚರಣೆ ನಿರಂತರವಾಗಿ ನಡೆಯಲಿ, ಮಕ್ಕಳಲ್ಲಿ ಕನ್ನಡಪ್ರೀತಿ ಬೆಳೆಸಲಿ ಎಂದು ಆಶಿಸಿದರು.
ವಿದ್ಯಾವಾಹಿನಿ ವಿದ್ಯಾಸಂಸ್ಥೆಯ ಪ್ರಿಯಾಪ್ರದೀಪ್ಕುಮಾರ್ ಅವರು, ಎಲ್ಲರಲ್ಲೂ ಕನ್ನಡ ಪ್ರೇಮಜಾಗೃತರಾಗಬೇಕು.ಮಾತೃಭಾಷೆಯ ಬಗ್ಗೆ ಸದಾಗೌರವ ಹೊಂದಬೇಕು.ಮನೆಗಳಲ್ಲಾಗಲಿ ಹೊರಗೆಯಾಗಲಿ ಕನ್ನಡವನ್ನೇ ಬಳಸಬೇಕು, ಕನ್ನಡವನ್ನೇ ಮೆರೆಸಬೇಕು ಎಂದರು.
ಇದನ್ನು ಓದಿ: ತುಮಕೂರು: ನವೆಂಬರ್ 7ರಂದು ಜ್ಞಾನಸಿರಿ ಕ್ಯಾಂಪಸ್, ಶೈಕ್ಷಣಿಕ ಭವನ ಹಾಗೂ ವಿವಿಧ ಕಟ್ಟಡಗಳ ಲೋಕಾರ್ಪಣಾ ಸಮಾರಂಭ
ಈ ವೇಳೆ ಕನ್ನಡ ನಾಡುನುಡಿಗಾಗಿ ದುಡಿಯುತ್ತಿರುವ ವಿದ್ವಾನ್ ಎಂ.ಜಿ.ಸಿದ್ಧರಾಮಯ್ಯ, ಲೇಖಕಿ ಬಾ.ಹ.ರಮಾಕುಮಾರಿ, ಆರತಿಪಟ್ರಮೆ, ಡಾ.ಗೀತಾವಸಂತ್, ಕಮಲ, ಲೋಕೇಶ್ವರ್ ಅವರಿಗೆ ಕಲ್ಪತರು ಕನ್ನಡ ಸಾಧಕರು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಡಾ.ಎಸ್.ಪರಮೇಶ್, ವಿದ್ಯಾವಾಹಿನಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಎನ್.ಬಿ.ಪ್ರದೀಪ್ಕುಮಾರ್, ಇನ್ನರ್ ವೀಲ್ ಸಂಸ್ಥೆ ಅಧ್ಯಕ್ಷೆ ಮಂಜುಳಾ ಲೋಕೇಶ್, ಡಾ.ಡಿ.ಎನ್.ಯೋಗೇಶ್ವರಪ್ಪ, ಬೆಳ್ಳಾವೆಶಿವಕುಮಾರ್, ಎಂ.ಜಿ.ಸಿದ್ಧರಾಮಯ್ಯ, ಟಿ.ಆರ್.ಸದಾಶಿವಯ್ಯ, ರುದ್ರಮೂರ್ತಿಎಲೆರಾಂಪುರ, ಕರಣಂರಮೇಶ್, ಚಿಕ್ಕಹನುಮಯ್ಯ ಸೇರಿದಂತೆ ಸಂಘಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.
– ಕೆ.ಬಿ.ಚಂದ್ರಚೂಡ
