ತುಮಕೂರು : ಜಿಲ್ಲಾ ನ್ಯಾಯಾಲಯದ ಹಿರಿಯ ವಕೀಲರು ಹಾಗೂ ತುಮಕೂರು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷರು ಆದ ಜೆ.ಕೆ.ಅನಿಲ್ರವರು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಸ್ಥಾನದ ಸ್ಪರ್ಧಿಸಿದ್ದು ಜೆ.ಕೆ.ಅನಿಲ್ ರವರಿಗೆ ಎಲ್ಲ ವಕೀಲರು ಜೆ.ಕೆ.ಅನಿಲ್ ರವರ ಕ್ರಮಸಂಖ್ಯೆ 4ಕ್ಕೆ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಿ ಅವರನ್ನು ಗೆಲ್ಲಿಸಿ ರಾಜ್ಯ ವಕೀಲರ ಪರಿಷತ್ತಿಗೆ ಕಳುಹಿಸಬೇಕೆಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಆರ್. ರಾಜೇಂದ್ರ ರಾಜಣ್ಣ ರವರು ತುಮಕೂರು ನ್ಯಾಯಲಯದಲ್ಲಿ ಹಾಗು ತುಮಕೂರು ವಕೀಲರ ಸಂಘದಲ್ಲಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯ,ಆರ್.ಪಾತಣ್ಣ,ಶಿವದೇವ್,ಗಡ್ಡಕೃಷ್ಣಮೂರ್ತಿ,ಸುರೇಶ್ ಕುಮಾರ್,ಲೋಕೇಶ್,ಮರಾಠಿ ಇತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
