ತುಮಕೂರು: ಪ್ರತಿಯೊಬ್ಬರೂ ಒತ್ತಡ ಮುಕ್ತರಾಗಿ ನಿತ್ಯ ವ್ಯಾಯಾಮ, ಮಿತ ಆಹಾರದ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಿಡಿತ ಆಸ್ಪತ್ರೆಯ ಹೆಸರಾಂತ ಹೃದಯತಜ್ಞ ಡಾ.ಹೆಚ್.ಎನ್.ಭಾನುಪ್ರಕಾಶ್ ಕರೆ ನೀಡಿದರು.
ನಗರದಲ್ಲಿ ಯೂನಿವರ್ಸಲ್ ಬ್ಯೂಸಿನೆಸ್ ಫೋರಂ ವತಿಯಿಂದ ಏರ್ಪಡಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಹೃದಯರೋಗ ಬರದಂತೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎನ್ನುವ ವಿಷಯ ಕುರಿತು ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ಒತ್ತಡದ ಜೀವನ ನಡೆಸುತ್ತಿದ್ದಾರೆ, ಮೊದಲು ಒತ್ತಡದಿಂದ ಮುಕ್ತರಾಗಬೇಕು ಎಂದರು.
ಮಿತ ಆಹಾರ, ಯೋಗ,ಧ್ಯಾನ ಮಾಡವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬದುದಾಗಿದೆ ಎಂದ ಅವರು ರೋಗ ಬಂದಾಗ ವೈದ್ಯರನ್ನು ಸಂಪರ್ಕ ಮಾಡುತ್ತಾರೆ, ರೋಗ ಬರದಂತೆ ಜಾಗೃತಿ ವಹಿಸುವುದೇ ಬಹಳ ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಚರ್ಮರೋಗ ತಜ್ಞರಾದ ಡಾ.ಜೆ.ಬಿ.ಸುಷ್ಮಾ ಮಾತನಾಡಿ ಇಂದು ಅನೇಕ ಕಾಯಿಲೆಗಳು ಚರ್ಮದಲ್ಲಿ ಕಾಣುವ ರೋಗದಿಂದ ವ್ಯಕ್ತವಾಗುತ್ತದೆ, ನಮಗೆ ಯಾವುದೇ ಕಾಯಿಲೆ ಇಲ್ಲ ಎನ್ನುವಂತೆಯೇ ಇರುತ್ತೇವೆ ಆದರೆ ಒಳಗಡೆ ಅದು ತನ್ನ ಪ್ರಭಾವ ಬೆಳೆಸುತ್ತಿರುತ್ತದೆ ತಮ್ಮ ಚರ್ಮದ ಮೇಲೆ ಗೋಚರವಾಗುತ್ತದೆ, ಕತ್ತಿನ ಸುತ್ತ ಕಪ್ಪು ಕಂಡು ಬರುತ್ತಿದೆ ಎಂದರೆ ತಮ್ಮ ದೇಹದ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತದೆ ಎಂದು ಅರ್ಥ ಎಂದರು.
ಹಿರಿಯ ಪತ್ರಕರ್ತರಾದ ಚಿ.ನಿ.ಪುರುಷೋತ್ತಮ್, ಆಯುರ್ವೇದ ವೈದ್ಯ ಡಾ.ಪ್ರಕಾಶ್ ಪಾಲ್ತೆ, ಗೋಪಿನಾಥ್, ಕಿರಣ್ರಾಜಶೇಖರಯ್ಯ,ಕಾಂತರಾಜ್,ಕೃಷ್ಣ,ವಿಕಾಸ್,ನಂದಿನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
