ತುಮಕೂರು : ಬಿಎಸ್‌ವೈ ಹೋರಾಟ ಕಾರ್ಯಕರ್ತರಿಗೆ ಪ್ರೇರಣೆಯಾಗಲಿ – ಜಿ.ಬಿ.ಜ್ಯೋತಿಗಣೇಶ್

ಬಿ.ಎಸ್.ಯಡಿಯೂರಪ್ಪನವರ 50ನೇ ವರ್ಷದ ರಾಜಕೀಯ ಜೀವನದ ಸಂಭ್ರಮ ಹಾಗೂ ಅವರ ಹುಟ್ಟುಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು, 50 ವರ್ಷಗಳ ಕಾಲ ವಿರಮಿಸದೆ ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಶ್ರೇಯಸ್ಸು ಯಡಿಯೂರಪ್ಪನವರಿಗೆ ಹೆಚ್ಚಿನದಾಗಿ ಸಲ್ಲುತ್ತದೆ ಎಂದರು.