ತುಮಕೂರು: ಇತ್ತೀಚೆಗೆ ನಡೆದ ಕರ್ನಾಟಕ ಕ್ರೀಡಾ ಕೂಟದಲ್ಲಿ ಟೆನ್ನಿಸ್ನಲ್ಲಿ ಕಂಚಿನ ಪದಕ ಪಡೆದ ಡಾ. ಮೇಘನ, ಲಾಂಗ್ ಜಂಪ್ನಲ್ಲಿ ಚಿನ್ನದ ಪದಕ ಗಳಿಸಿದ ಪ್ರಾಪ್ತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಆದ ಅನುಶಾಂತರಾಜು ಹಾಗೂ ವೆಂಕಟೇಶ್, ಟಿ.ಕೆ. ಆನಂದ್ ಅವರಿಗೆ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಮುಂಜಾನೆ ಗೆಳೆಯರ ಬಳಗದ ವತಿಯಿಂದ ಸನ್ಮಾನ ನಡೆಯಿತು.
ಸನ್ಮಾನ ಕಾರ್ಯಕ್ರಮದಲ್ಲಿ ಮಧು ಗೋಲ್ಡ್, ವಾಲೆ ಚಂದ್ರಯ್ಯ, ವಿನಯ್, ಕೃಷ್ಣರಾವ್, ಸುದರ್ಶನ್, ಪ್ರಸನ್ನ, ನರೇಶ್, ವಿರೂಪಾಕ್ಷ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭೆಗಳಿಗೆ ಈ ರೀತಿಯ ಗೌರವವು ಮತ್ತಷ್ಟು ಪ್ರೇರಣೆಯಾಗುತ್ತದೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
– ಕೆ.ಬಿ.ಚಂದ್ರಚೂಡ
