ತುಮಕೂರು:ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜಒಡೆಯರ್ ರವರು ಪ್ರಾರಂಭಿಸಿದ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜಂಟ್ಸ್ ಲಿಮಿಟೆಡ್ ನ ಮೈಸೂರು ಸ್ಯಾಂಡಲ್ ಸಾಬೂನು ಮೇಳವನ್ನು ನಗರದ ಚಿಲುಮೆ ಪೋಲೀಸ್ ಸಮುದಾಯ ಭವನದಲ್ಲಿ ಇಂದಿನಿಂದ ನವೆಂಬರ್ 4ವರೆಗೆ ಬೆಳಿಗ್ಗೆ 9-30 ರಿಂದ ರಾತ್ರಿ 9ರವರೆಗೆ ಏರ್ಪಡಿಸಲಾಗಿದೆ ಎಂದು ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜಂಟ್ಸ್ ಲಿಮಿಟೆಡ್ ನ ಪ್ರಧಾನ ವ್ಯವಸ್ಥಾಪಕರಾದ ಎಂ.ಗಂಗಪ್ಪನವರು ತಿಳಿಸಿದರು.
ಅವರು ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ನಮ್ಮ ಸಂಸ್ಥೆ 100 ವರ್ಷಗಳ ಭವ್ಯ ಪರಂಪರೆ ಉಳ್ಳ ಸಂಸ್ಥೆಯಾಗಿದೆ,2024-25ರಲ್ಲಿ 1787ಕೋಟಿ ವ್ಯವಹಾರ ನಡೆದಿ 451 ಕೋಟಿ ಲಾಭಗಳಿಸಿದೆ,2025-26ನೇ ಸಾಲಿನಲ್ಲಿ ಸೆಪ್ಟೆಂಬರ್ ಅಂತ್ಯದವರೆಗೆ 1022ಕೋಟಿ ವಹಿವಾಟು ನಡೆಸಿದೆ,ಸಂಸ್ಥೆಯ ಉತ್ಪನ್ನಗಳಾದ ಸ್ಯಾಂಡಲ್ ಸೋಪು,ಸ್ಯಾಂಡಲ್ಗಿಫ್ಟ್ ಫ್ಯಾಕ್,ಮೈಸೂರು ಸ್ಯಾಂಡಲ್ ಗೋಲ್ಡ್,ಮೈಸೂರು ಸ್ಯಾಂಡಲ್ ಗೋಲ್ಡ್ ಸಿಕ್ಸರ್,ಮೈಸೂರು ಸ್ಯಾಂಡಲ್ ಧೂಪ್,ಮೈಸೂರು ಸ್ಯಾಂಡಲ್ ಅಗರಬತ್ತಿಗಳು,ಹ್ಯಾಂಡ್ ವಾಷ್,ಫೆನಾಯಿಲ್,ಬೇಬಿ ಸೋಪು,ಸ್ಯಾಂಡಲ್ ಆಯಿಲ್,ಕಾರ್ಬೋನಿಕ್ ಸಾಬೂನು, ವಾಷಿಂಗ್ ಬಾರ್,ಮಾರ್ಜಕ ಬಿಲ್ಲೆ ಇತರೆ ವಿವಿಧ ವಸ್ತುಗಳು ಗ್ರಾಹಕರಿಗೆ ಪ್ರಿಯವಾದ ವಸ್ತುಗಳಾಗಿವೆ,ಇದರ ಜೊತೆಗೆ ಶ್ರೀಗಂಧ ಬೆಳೆಯಲು ಸಂಸ್ಥೆಯು ರಾಜ್ಯದ ವಿವಿಧ ಭಾಗಗಳಲ್ಲಿ ಒಪ್ಪಂದ ಮಾಡಿಕೊಂಡಿದೆ,2010,2017,2019ನೇ ಸಾಲಿಗೆ ಸಾರ್ವಜನಿಕ ಶ್ರೇಷ್ಠತೆಗಾಗಿ ಮುಖ್ಯಮಂತ್ರಿರತ್ನ ಪ್ರಶಸ್ತಿ ಸೇರಿದಂತೆ ರಫ್ತು,ಕಾಸ್ಟ್ ಅಕೌಂಟಿಂಗ್ ನಿರ್ವಹಣೆಗಾಗಿ ಹಲವಾರು ಪ್ರಶಸ್ತಿಗಳು ಸಂಸ್ಥೆಗೆ ಸಂದಿದೆ,ಶ್ರೀಗಂಧದ ಎಣ್ಣೆ ಸೇರಿದಂತೆ 50ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸುತ್ತಿದೆ ಎಂದು ತಿಳಿಸಿದರು.
ಸಂಸ್ಥೆಯ ವ್ಯವಸ್ಥಾಪಕರಾದ ಸುಶ್ಮಾರವರು ಮಾತನಾಡುತ್ತಾ ಸಂಸ್ಥೆಯು ತನ್ನ ಉತ್ಪನ್ನಗಳಿಗೆ ಐಎಸ್.ಓ.9001-2015 ಪ್ರಮಾಣಪತ್ರವನ್ನು ಪಡೆದಿದ್ದು,ಪರಿಸರ ನೀತಿಯಂತೆ 14001-2015 ಪ್ರಮಾಣಪತ್ರವನ್ನು ಸಹ ಪಡೆದ ಹೆಗ್ಗಳಿಕೆ ನಮ್ಮದು,ರಾಜ್ಯದ ವಿವಿಧ ನಗರಗಳಲ್ಲಿ ಸೋಪ್ ಮೇಳವನ್ನು ಆಯೋಜಿಸುತ್ತಾ ಬರುತ್ತಿದ್ದೇವೆ ಈಗ ತುಮಕೂರು ನಗರದಲ್ಲಿ ಆಯೋಜಿಸಿದ್ದು ಈ ಮೇಳದಲ್ಲಿ ಶೇ 5 ರಿಂದ 10ರವರೆಗೆ ರಿಯಾಯಿತಿ ಇರುತ್ತದೆ,ಸಾಬೂನು ಮೇಳದಲ್ಲಿ ಮೈಸೂರು ಅರಮನೆಯ ದರ್ಬಾರ್ ಹಾಲ್ ಸೆಟ್ಟನ್ನು ಹಾಕಿದ್ದೇವೆ,50ಕ್ಕೂ ವಿವಿಧ ರೀತಿಯ ನಮ್ಮ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಇರುತ್ತದೆ ಆದ್ದರಿಂದ ತುಮಕೂರು ತಾಲ್ಲೋಕಿನ ಎಲ್ಲ ಸಾರ್ವಜನಿಕರು,ಗ್ರಾಹಕರು ಕುಟುಂಬ ಸಮೇತರಾಗಿ ಆಗಮಿಸಿ ಸಂಸ್ಥೆಯ ಉತ್ಪನ್ನಗಳನ್ನ ವೀಕ್ಷಿಸಿ ಖರೀದಿಸಿ ಸಂಸ್ಥೆಯನ್ನು ಬೆಳೆಸಿ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
– ಕೆ.ಬಿ.ಚಂದ್ರಚೂಡ

[…] ಇದನ್ನು ಓದಿ:ತುಮಕೂರು: ಅ.25 ರಿಂದ ನವೆಂಬರ್ 4ರವರೆಗೆ ಮೈಸೂರ… […]