ತುಮಕೂರು:ಶ್ರೀದೇವಿ ಶಿಕ್ಷಣ ಸಂಸ್ಥೆ ಇದೇ ಫೆಬ್ರವರಿ 14 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪಿಯುಸಿ ವಿಭಾಗದೊಂದಿಗೆ ಸೇರಿ ನೀಟ್ ಕುರಿತ ಜಾಗೃತಿ ಕಾರ್ಯಾಗಾರವನ್ನು ಪಿಯು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್ ತಿಳಿಸಿದ್ದಾರೆ.
ಶ್ರೀದೇವಿ ಶಿಕ್ಷಣ ಸಂಸ್ಥೆ ಫೆಬ್ರವರಿ 14 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪಿಯುಸಿ ವಿಭಾಗದೊಂದಿಗೆ ಸೇರಿ ನೀಟ್ ಕುರಿತ ಜಾಗೃತಿ ಕಾರ್ಯಾಗಾರವನ್ನು ದ್ವಿತೀಯ ಪಿಯುಸಿ ಓದುತ್ತಿರುವ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಮೇ.03 ರಂದು ಎನ್.ಟಿ.ಎ ನಿಂದ ನೀಟ್ ಪರೀಕ್ಷೆ ಆಯೋಜಿಸಿದ್ದು, ಪರೀಕ್ಷೆ ತೆಗದುಕೊಳ್ಳುವ ವಿಧಾನ, ಪರೀಕ್ಷೆ ತಯಾರಿ, ಪ್ರಶ್ನೆ ಪತ್ರಿಕೆಗಳ ಮಾದರಿ, ಉತ್ತನ ನೀಡುವ ವಿಧಾನ ಸೇರಿದಂತೆ ನೀಟ್ಗೆ ಸಂಬಂಧಿಸಿದ ಸಮಗ್ರ ವಿಚಾರಗಳ ಕುರಿತು ನುರಿತ ತಜ್ಞರಿಂದ ವಿಶೇಷ ಬೋಧನೆ, ಸಂವಾದ ಹಾಗೂ ಮಾರ್ಗದರ್ಶನ ಕಾರ್ಯಾಗಾರ ನಡೆಯಲಿದೆ ಎಂದರು.
ಪ್ರತಿಯೊಬ್ಬ ತಂದೆ, ತಾಯಿಯ ಕನಸು ನನ್ನ ಮಗ ಡಾಕ್ಟರ್ ಆಗಬೇಕು, ಇಂಜಿನಿಯರ್ ಆಗಬೇಕು, ಒಳ್ಳೆಯ ಉದ್ಯೋಗಕ್ಕೆ ಹೋಗಬೇಕು ಎಂಬುದಾಗಿದೆ. ಹಾಗಾಗಿ ನೀಟ್ ಮತ್ತು ಸಿಇಟಿ ಬಗ್ಗೆ ಹೆಚ್ಚು ಒತ್ತು ನೀಡುತ್ತಾರೆ. ನೀಟ್ ಪರೀಕ್ಷೆ ತೆಗೆದುಕೊಳ್ಳುವುದು ಬಹುತೇಕ ಆನ್ಲೈನ್ ಪ್ರಕಿಯೆಯಾಗಿರುವ ಕಾರಣ, ಗ್ರಾಮೀಣ ವಿದ್ಯಾರ್ಥಿಗಳಿಗೆ ಬಹಳ ಕಷ್ಟ ಆಗುತ್ತಿದೆ. ಹಾಗಾಗಿ ಇದರ ಬಗ್ಗೆ ತಿಳುವಳಿಕೆ ನೀಡುವ ಸಲುವಾಗಿ ಫೆ.14ರ ಶನಿವಾರ ಹಮ್ಮಿಕೊಳ್ಳಲಾಗಿದೆ. ಮಕ್ಕಳು ಯಾವ ಕೋರ್ಸು ಆಯ್ಕೆ ಮಾಡಿಕೊಳ್ಳಬೇಕು.ಉದ್ಯೋಗ ಮಾರುಕಟ್ಟೆಯಲ್ಲಿ ಯಾವ ಕೋರ್ಸುಗಳಿಗೆ ಬೆಲೆ ಇದೆ ಎಂಬ ಮಾಹಿತಿಯ ಜೊತೆಗೆ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಜೊತೆಗೆ, ಹೊಸದಾಗಿ ಬ್ಯಾಚುಲರ್ ಅಫ್ ಪಿಜಿಯೋಥರಪಿ, ಬ್ಯಾಚುಲರ್ ಅಫ್ ಅಕ್ಯುಪೇಷನ್ ಥರಪಿ ಎಂಬ ಎರಡು ಹೊಸ ವಿಷಯಗಳು ಸೇರ್ಪಡೆಗೊಂಡಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಂ.ಎಸ್.ಪಾಟೀಲ್, ಅಂಬಿಕಾ ಹುಲಿನಾಯ್ಕರ್, ಡಾ.ಲಾವಣ್ಯ, ಡಾ.ನರೇಂದ್ರ ವಿಶ್ವನಾಥ್, ಡಾ.ಎನ್.ಚಂದ್ರಶೇಖರ್, ಡಾ.ಕೆ.ಎಸ್.ರಾಮಕೃಷ್ಣ, ಪ್ರೊ.ಅಜಯ್.ಸಿ.,ಡಾ.ಎಂ.ಸಿ.ಕೃಷ್ಣ, ಡಾ.ಸಿ.ಪಿ.ಚಂದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
