ತುಮಕೂರು: ನಗರದ 31ನೇ ವಾರ್ಡಿನ ಜಯನಗರದಲ್ಲಿ ನಿರ್ಮಿಸಲಾದ ಹೊಸ ಆಟೋನಿಲ್ದಾಣ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಮುರಳೀಧರ ಹಾಲಪ್ಪ ಅವರು ಭಾನುವಾರ ಉದ್ಘಾಟಿಸಿದರು. ಜಯನಗರ 2ನೇ ಬಸ್ ನಿಲ್ದಾಣದ ಬಳಿ ನಡೆದ ಈ ಕಾರ್ಯಕ್ರಮದಲ್ಲಿ ಸ್ಥಳೀಯ ನಾಗರಿಕರು ಹಾಗೂ ಆಟೋ ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಆರ್.ಎಸ್. ವೀರಪ್ಪದೇವರು, ಬಿ.ವಿ. ದ್ವಾರಕನಾಥ್, ಪ್ರತಾಪ್, ನವೀನ್, ಮೋಹನ್ ಸೇರಿದಂತೆ ಹಲವರು ಉಪಸ್ಥಿತರಿದ್ದು, ಮಾತನಾಡಿದವರು ಹೊಸ ಆಟೋನಿಲ್ದಾಣದಿಂದ ಪ್ರದೇಶದ ಸಾರಿಗೆ ಸೌಲಭ್ಯ ಮತ್ತಷ್ಟು ಸುಗಮವಾಗಲಿದೆ ಎಂದು ಅಭಿಪ್ರಾಯಪಟ್ಟರು. ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲೇ ಉದ್ಘಾಟನೆ ನಡೆದಿರುವುದು ಪ್ರದೇಶದ ಜನತೆಗೆ ದ್ವಿಗುಣ ಉಲ್ಲಾಸವನ್ನು ತಂದಿದೆ ಎನ್ನಲಾಯಿತು.
ಇದನ್ನು ಓದಿ: ಟಿ .ನರಸೀಪುರ: ನ 26 ರಂದು ಮೈಸೂರಿನ ಮಾನಸಗಂಗೋತ್ರಿಯ ಲಲಿತಕಲೆಗಳ ನಾಟಕ ಸಭಾಂಗಣದಲ್ಲಿ ಸಂವಿಧಾನ ರಕ್ಷಣೆಗೆ ಜಾಗೃತಿ ಸಮಾವೇಶ
– ಕೆ.ಬಿ.ಚಂದ್ರಚೂಡ

[…] […]