ತುಮಕೂರು :ಧನಿಯಾಕುಮಾರ್ ನೇತೃತ್ವದ “ಕನ್ನಡ ಸೇನೆ ಕರ್ನಾಟಕ “ಸಂಘಟನೆಯು 25ನೇ ವರ್ಷದ ಬೆಳ್ಳಿ ಹಬ್ಬ ಆಚರಿಸುತ್ತಿರುವ ಸಂದರ್ಭದಲ್ಲಿ ಕಳೆದ ಏಳು ವರ್ಷಗಳಿಂದ ತುಮಕೂರು ಜಿಲ್ಲಾ ದಿನಪತ್ರಿಕೆ ಹಂಚಿಕೆದಾರರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಸಂಘಟನೆಯನ್ನು ಮುನ್ನಡೆಸುತ್ತಾ, ನಿಸ್ವಾರ್ಥ ಸೇವೆ ಸಲ್ಲಿಸಿದ ಶ್ರೀಯುತ ಚಲುವರಾಜು ( ರಘು) ರವರಿಗೆ ಕನ್ನಡ ಸೇನೆ ವತಿಯಿಂದ “ಸೇವಾ ರತ್ನ” ಪ್ರಶಸ್ತಿ ನೀಡಿ ಗೌರವಿಸುತ್ತಿದೆ.ತುಮಕೂರು ಜಿಲ್ಲೆಯ ಪತ್ರಿಕಾ ವಿತರಕರಿಗೆ ಗೌರವ ನೀಡಿದ ಕನ್ನಡ ಸೇನೆಯ ಧನಿಯಾ ಕುಮಾರ್ ರವರಿಗೆ ಮತ್ತು ಅವರ ತಂಡಕ್ಕೆ ಸಮಸ್ತ ರಾಜ್ಯದ ಪತ್ರಿಕಾ ವಿತರಕರು ಧನ್ಯವಾದಗಳನ್ನು ತಿಳಿಸಿದ್ದಾರೆ.
ರಾಜ್ಯಾಧ್ಯಕ್ಷರ ಹರ್ಷ: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕೆ.ಶಂಭುಲಿಂಗ ಹಾಗೂ ಉಪಾಧ್ಯಕ್ಷರಾದ ಪ್ರಶಾಂತ್ ಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಸಂಗಮ್ ಸುರೇಶ್ ರವರು ಹರ್ಷ ವ್ಯಕ್ತಪಡಿಸಿದ್ದಾರೆ.
-ಕೆ.ಬಿ.ಚಂದ್ರಚೂಡ.
