ತುಮಕೂರು: ತಾಲೂಕಿನ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ನ ಗ್ರಾಮಾಂತರ ಯೋಜನಾ ಕಚೇರಿ ವ್ಯಾಪ್ತಿಯ ಬೆಳ್ಳಾವಿ ವಲಯದ ಮಾವಿನಕುಂಟೆ ಗ್ರಾಮದಲ್ಲಿ ವಾಣಿಜ್ಯ ನರ್ಸರಿ ತರಬೇತಿಯನ್ನು ಊರಿನ ಗುಡಿ ಗೌಡರದ ಚಿಕ್ಕಿರಪ್ಪ ರವರು ಉದ್ಘಾಟಿಸಿ ಶುಭಹಾರೈಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದ ನಿವೃತ್ತ ಕೃಷಿ ಅಧಿಕಾರಿ ರಾಜಶೇಖರಯ್ಯ ರವರು ವಾಣಿಜ್ಯ ನರ್ಸರಿ ಮಹತ್ವ ಇಲಾಖೆ ಅನುದಾನದ ಬಗ್ಗೆ ಹಾಗೂ ರೈತ ಸಂಪರ್ಕ ಕೇಂದ್ರದಲ್ಲಿರುವ ವಿವಿಧ ಕಾರ್ಯಕ್ರಮ ಮತ್ತು ಅನುದಾನಗಳ ಬಗ್ಗೆ ಮಾಹಿತಿ ನೀಡಿದರು.
ಇದನ್ನು ಓದು: ತುಮಕೂರು: ಕರ್ನಾಟಕದ ಅಂಗಾಂಗಕಸಿ ಪರಿಸರ ವ್ಯವಸ್ಥೆಯ ಬಲವರ್ಧನೆ:ಡಾ||ರಾಜೀವ್.ಇ.ಎನ್.
ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ತೊಂಟಾರಾಧ್ಯ. ಕೃಷಿ ಮೇಲ್ವಿಚಾರಕ ರಾಘವೇಂದ್ರ ಎನ್. ವಲಯ ಮೇಲ್ವಿಚಾರಕ ಮನೋಜ್. ಸೇವಾಪ್ರತಿನಿಧಿ ಶ್ರೀಮತಿ ಸಿಂಧು, ಪ್ರಗತಿಬಂಧು ಹಾಗೂ ಸ್ವಸಹಾಯ ಸಂಘದ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ

[…] ಇದನ್ನು ಓದಿ: ತುಮಕೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ… […]