ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಉಚಿತ ಅತಿಥಿ ಶಿಕ್ಷಕರನ್ನು ನೇಮಿಸಲಾಗುತ್ತಿದೆ,ಶಾಲೆಗಳಿಗೆ ಆಟದ ಮೈದಾನ, ಶಾಲಾಕೊಠಡಿ, ಕುಡಿಯುವ ನೀರು, ಶಾಲಾ ಕಟ್ಟಡಗಳ ದುರಸ್ತಿ, ಶೌಚಾಲಯ, ಶಾಲಾ ಆವರಣ, ರಂಗಮಂದಿರ, ಬೋಧನಾ ಸಾಮಗ್ರಿಗಳಿಗೆ ಧನಸಹಾಯ ಮಾಡಲಾಗುತ್ತಿದೆ, ಸ್ವಸಹಾಯ ಸಂಘಗಳ ಸದಸ್ಯರ 125010 ಮಕ್ಕಳಿಗೆ ಸುಮಾರು 153ಕೋಟಿ ವಿದ್ಯಾರ್ಥಿ ವೇತನಗಳನ್ನು ನೀಡಲಾಗುತ್ತಿದೆ.

ರಾಜ್ಯದ ಒಟ್ಟು 11,621 ಶಾಲೆಗಳಿಗೆ 75518 ಡೆಸ್ಕ್ ಮತ್ತು ಬೆಂಚ್ ಗಳನ್ನು ಧರ್ಮಸ್ಥಳದಿಂದ ನೀಡಲಾಗಿದೆ,ಇದಕ್ಕಾಗಿ ಸುಮಾರು 29ಕೋಟಿ ವ್ಯಯಿಸಲಾಗಿದೆ, ತುಮಕೂರು ಜಿಲ್ಲೆಯ 212 ಶಾಲೆಗಳಿಗೆ 1731ಜೊತೆ ಡೆಸ್ಕ್ ಮತ್ತು ಬೆಂಚುಗಳನ್ನು ಉಚಿತವಾಗಿ ನೀಡಲಾಗಿದೆ, ಪೂಜ್ಯರ ಆಶಯ ಒಂದೇ ಎಲ್ಲರೂ ಶಿಕ್ಷಣವನ್ನು ಪಡೆಯಬೇಕು, ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಶಿಕ್ಷಣ ಪಡೆದು ಜ್ಞಾನವಂತರಾಗಿ,ದೇಶಕ್ಕೆ ಒಳ್ಳೆಯ ಹೆಸರು ತರಬೇಕು ಈ ಮೂಲಕ ಸತ್ಪ್ರಜೆಯಾಗಿ ಎಲ್ಲರಿಗೂ ಮಾರ್ಗದರ್ಶನ ನೀಡುವ ಹಂತಕ್ಕೆ ಬೆಳೆಯಬೇಕು,ಶಿಕ್ಷಣದಿಂದ ಮಾತ್ರ ಬಡತನ ನಿರ್ಮೂಲನೆ ಸಾಧ್ಯ ಎಂದು ಸದಾ ಹೇಳುವ ಪೂಜ್ಯ ವೀರೇಂದ್ರಹೆಗ್ಗಡೆರವರ ಆಶಯದಂತೆ ಎಲ್ಲರೂ ನಡೆಯಬೇಕು ಎಂದು ಎಂ.ಶೀನಪ್ಪನವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ,ತಾಲ್ಲೋಕು ಯೋಜನಾಧಿಕಾರಿ ಪ್ರಭಾಕರ್ ನಾಯಕ್,ಪಿ.ಬಿ.ಸಂದೇಶ್ ,ಶಾಲೆಯ ಶಿಕ್ಷಕರು,ಇತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
