ತುಮಕೂರು: ಕ್ಯಾಪ್ಟನ್ ಹುದ್ದೆಗೆ ಪದೋನ್ನತಿ ಹೊಂದಿದ ಸರ್ವೋದಯ ಪದವಿಪೂರ್ವ ಕಾಲೇಜಿನ ಎನ್.ಸಿ. ಸಿ.ಅಧಿಕಾರಿ ಎಸ್.ಪ್ರದೀಪ್ ರವರನ್ನು 4 ನೇ ಕರ್ನಾಟಕ ಬೆಟಾಲಿಯನ್ ನ ಕಮಾನ್ಡಿಂಗ್ ಅಧಿಕಾರಿ ಕರ್ನಲ್ ನರೇಂದ್ರ ಭಂಡಾರಿ, ಲೆಫ್ಟಿನೆಂಟ್ ಕರ್ನಲ್ ಬಿ.ಅಭಿಲಾಷ್ ರವರು ಅಭಿನಂದಿಸಿದರು. ಪ್ರಾಚಾರ್ಯರಾದ ಶ್ರೀ ಮತಿ ಜಮುನಾರಾಜ್ ಉಪಸ್ಥಿತರಿದ್ದರು.
ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರರಾದ ಕೆ.ಎಸ್.ಸಂದೀಪ್,ಪ್ರೊ.ರಾಮಲಿಂಗಾರೆಡ್ಡಿ,ಪತ್ರಕರ್ತ ಕೆ.ಬಿ.ಚಂದ್ರಚೂಡ,ಪ್ರದೀಪ್ರವರ ಶ್ರೀ ಸಿದ್ಧಗಂಗಾ ಪ್ರೌಢಶಾಲೆಯ ಹಳೆಯ ಸಹಪಾಠಿಗಳು, ಸಂಘ-ಸಂಸ್ಥೆಯ ಪದಾಧಿಕಾರಿಗಳು,ಕಾಲೇಜಿನ ಆಡಳಿತ ಮಂಡಳಿಯವರು ಅಭಿನಂದಿಸಿದರು.
– ಕೆ.ಬಿ.ಚಂದ್ರಚೂಡ
