ತುಮಕೂರು:ಜಿಲ್ಲೆಯ ಹಿರಿಯ ಪತ್ರಕರ್ತರೂ,ಅಮೃತವಾಣಿ ದಿನಪತ್ರಿಕೆಯ ಮುಖ್ಯ ವರದಿಗಾರರಾದ ನರಸಿಂಹಯ್ಯನವರಿಗೆ 2025ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಗೃಹಸಚಿವ ಡಾ||ಜಿ.ಪರಮೇಶ್ವರ್ ರವರು ನೀಡಿ ಸನ್ಮಾನಿಸಿದರು.
ಪ್ರಶಸ್ತಿ ಪುರಸ್ಕೃತರನ್ನು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯ,ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿಮಹೇಶ್,ಹಿರಿಯ ವಕೀಲರಾದ ಎಸ್.ಎಂ.ಕೃಷ್ಣಮೂರ್ತಿ,ಬಿ.ಆರ್.ರಾಮಕೃಷ್ಣಯ್ಯ,ಕೆ.ಬಿ.ಚಂದ್ರಚೂಡ,ಟಿ.ಜಿ.ಸತೀಶ್,ಡಿ.ಸಿ.ಹಿಮಾನಂದ್, ಜೆ.ಕೆ.ಅನಿಲ್,ಹೈಕೋರ್ಟ್ ಹಿರಿಯ ವಕೀಲರಾದ ಎಂ.ಎನ್.ಮಧುಸೂಧನ್,ಟಿ.ವಿ.ಸುಬ್ರಹ್ಮಣ್ಯಪ್ರಸಾದ್,ಮಾಜಿ ಶಾಸಕ ಗಂಗಹನುಮಯ್ಯ,ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಕಮಲಾಗಂಗಹನುಮಯ್ಯ,
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಚಿ.ನಿ.ಪುರುಷೋತ್ತಮ್,ಪ್ರಧಾನಕಾರ್ಯದರ್ಶಿ ರಘುರಾಮ್,ತೋಸಿ ಕೃಷ್ಣಮೂರ್ತಿ,ಶಾಸಕ ಜಿ.ಬಿ.ಜ್ಯೋತಿಗಣೇಶ್,ಹಿರಿಯ ಪತ್ರಕರ್ತರು,ವಕೀಲರುಗಳು ಮತ್ತು ಇತರರು ಶುಭಹಾರೈಸಿದರು.
ವರದಿ : ಕೆ ಬಿ ಚಂದ್ರಚೂಡ್
