ತುಮಕೂರು: 12ನೇ ಶತಮಾನದ ಶರಣರು ಸಾರಿದ ಸಿದ್ಧಾಂತವು ಮಾನವ ಸಿದ್ಧಾಂತ. ಕಾಯಕತತ್ವ, ಸಮಾನತೆ, ತನು ಶುದ್ಧ, ಮನ ಶುದ್ಧ ಗುಣಗಳ ತತ್ವ-ಸಂದೇಶದ ಶರಣರಅನುಭವ ಮಂಟಪ 21ನೇ ಶತಮಾನದಲ್ಲಿ ಮಾನವರು ಶಾಂತಿ, ಸೌಹಾರ್ದತೆಯಿಂದ ಬಾಳಲು ಮಾರ್ಗದರ್ಶನ ನೀಡಿರುವ ಸಿದ್ಧಾಂತವಾಗಿದೆ ಎಂದು ಸಿದ್ಧಗಂಗಾ ಮಠದ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾದರಾಜ್ಯ ಘಟಕದಿಂದ ನಗರದ ಗುರುಕುಲ ಆರ್ಕೇಡ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಇನ್ನರ್ವರ್ಸ್ 360 ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಆನ್ಲೈನ್ಅನುಭವ ಮಂಟಪ’ ಎಂಬ ವೆಬ್ಸೈಟ್ಗೆ ಚಾಲನೆ ನೀಡಿ ಮಾತನಾಡಿದ ಸ್ವಾಮೀಜಿ, ಶರಣರ 12ನೇ ಶತಮಾನ ಸುವರ್ಣಯುಗ. ಜಗತ್ತಿನಇತಿಹಾಸದಲ್ಲಿ ಈ ಕಾಲಾವಧಿ ಮಹತ್ವದ ಸ್ಥಾನಮಾನ ಪಡೆದಿದೆ. ಬಸವಾದಿ ಶರಣರು ವಚನಗಳ ನುಡಿಮುತ್ತುಗಳು, ಸತ್ಯಶುದ್ಧವಾದಕಾಯಕ ಮತ್ತು ದಾಸೋಹ ತತ್ವಗಳು ಶರಣರನ್ನು ಮುನ್ನೆಲೆಗೆ ತಂದವು ಎಂದರು.
ವಚನ ಸಾಹಿತ್ಯವು 12ನೇ ಶತಮಾನದಲ್ಲಿ ಶರಣರು ಬೆಳೆದ ಚಿನ್ನದ ಬೆಳೆ.ಶರಣರಅನುಭವ ಮಂಟಪ ಸರ್ವಸಮಾನತೆ ಸಾರುವ, ಜ್ಞಾನ ಮೂಡಿಸುವ ಮಂಟಪವಾಗಿತ್ತು.ಅನುಭವ ಮಂಟಪಕ್ಕೆಕಾಯಕ ಹಾಗೂದಾಸೋಹದಗೋಡೆ, ಸರ್ವಸಮಾನತೆಯ ಮೇಲ್ಛಾವಣೆಇತ್ತು.ತನು ಶುದ್ಧತೆ, ಮನ ಶುದ್ಧತೆ, ಭಾವ ಶುದ್ಧತೆ ಮುಂತಾದ ಗುಣಗಳು ಅನುಭವ ಮಂಟಪ ಪ್ರವೇಶದಅರ್ಹತೆಯಾಗಿತ್ತು.ಮಂಟಪದಲ್ಲಿಜಾತಿ, ಲಿಂಗದ ಬೇಧಭಾವವಿರಲಿಲ್ಲ, ಸಮಾನರಾಗಿ ಕುಳಿತು ಚರ್ಚಿಸಲು ಮುಕ್ತ
ಅವಕಾಶವಿತ್ತು ಎಂಬುದನ್ನು ಅಭಿಮಾನದಿಂದ ಹೇಳಬೇಕು ಎಂದು ಶಿವಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಮಹಾಸಭಾದ ಜಿಲ್ಲಾ ಗೌರವಾಧ್ಯಕ್ಷರೂ ಆದ ಕೆರೆಗೋಡಿ ರಂಗಾಪುರ ಮಠದ ಗುರುಪರದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಶರಣರ ಅನುಭವ ಮಂಟಪದಲ್ಲಿ ಸರ್ವಸಮಾನತೆ ಇತ್ತು.ಪ್ರತಿಯೊಬ್ಬರೂ ಸ್ವತಂತ್ರ ಭಾವನೆ ವ್ಯಕ್ತಪಡಿಸಲು ಅವಕಾಶವಿತ್ತು.ಶರಣರ ಅನುಭವ ಮಂಟಪದ ಆದರ್ಶಗಳನ್ನು ಇಂದಿನ ರಾಜಕೀಯ ವ್ಯವಸ್ಥೆಗೆ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.
ಮಹಾಸಭಾದ ಪ್ರಧಾನ ಕಾರ್ಯದರ್ಶಿ ಈಶ್ವರ ಬಿ.ಖಂಡ್ರೆ ಅವರು ವರ್ಚುಯಲ್ನಲ್ಲಿ ಮಾತನಾಡಿ, ಯುವಜನರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ.ಹಿರಿಯರಿಗೆ ಗೌರವ ಕೊಡುತ್ತಿಲ್ಲ. ಮೊಬೈಲ್, ಇಂಟನರ್ನೆಟ್ದಾಸರಾಗಿದ್ದಾರೆ.ಅವರನ್ನು ಸರಿದಾರಿಗೆ ತರಲು ಅವರು ಬಳಸುವ ಸಾಮಾಜಿಕ ಜಾಲತಾಣದ ಮೂಲಕವೇ ತಿಳುವಳಿಕೆ ಮೂಡಿಸಬೇಕು ಎಂದು ಸಲಹೆ ಮಾಡಿದರು.

ಸಮಾರಂಭದ ಅಧ್ಯಕ್ಷತೆವಹಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭಾರಾಜ್ಯಾಧ್ಯಕ್ಷ ಶಂಕರ ಮಹಾದೇವ ಬಿದರಿ ಮಾತನಾಡಿ, ಸಮಾಜದಲ್ಲಿ ದ್ವೇಷ ಕಡಿಮೆ ಮಾಡಿ ಪ್ರೀತಿ ಬೆಳೆಸುವ ಕೆಲಸ ಆಗಬೇಕು.ಶರಣರ ಅನುಭವ ಮಂಟಪದ ಆದರ್ಶಗಳನ್ನು ತಿಳಿಸುವ ಮೂಲಕ ಸಮಾಜ ಪರಿವರ್ತನೆಗೆ ಪ್ರಯತ್ನಿಸಬೇಕು.ಈ ನಿಟ್ಟಿನಲ್ಲಿ ಇನ್ನರ್ವರ್ಸ್ 360 ಸಂಸ್ಥೆಯ ಕೆ.ಆರ್.ಶಿವರಾಮ್ ಅವರು ಅಭಿವೃದ್ಧಿಪಡಿಸಿರುವ ಆನ್ಲೈನ್ಅನುಭವ ಮಂಟಪ ಸಹಕಾರಿಯಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಾಗರನಹಳ್ಳಿ ನಟರಾಜ್ ಟಿ.ಕೆ.ನಂಜುಂಡಪ್ಪ, ಜಿ.ಎನ್.ಬಸವರಾಜಯ್ಯ, ಕೆ.ಆರ್.ಶಿವರಾಮ್, ಮಹಾಸಭಾದ ಜಿಲ್ಲಾಧ್ಯಕ್ಷ ಡಾ.ಎಸ್.ಪರಮೇಶ್, ವಿಜಯಕುಮಾರ್, ಡಾ||ದರ್ಶನ್.ಕೆ.ಎಲ್, ಗುರುಕುಲ ಮಲ್ಲಿಕಾರ್ಜುನ್, ಬಸವರಾಜಪ್ಪ ಮೊದಲಾದವರು ಭಾಗವಹಿಸಿದ್ದರು.
– ಕೆ.ಬಿ.ಚಂದ್ರಚೂಡ
