ತುಮಕೂರು:ಭಾರತವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಹೊರತರಲು ಜೈಲು ವಾಸ ಅನುಭವಿಸಿದ ಮಹಾತ್ವಗಾಂಧಿ ಅವರ ಸ್ವಾರ್ಥರಹಿತ ಹೋರಾಟ ಕುರಿತು ಸುಳ್ಳು ಸುದ್ದಿ ಹರಡಿಸುತ್ತಿರುವುದು ನಾಚಿಕೆಗೇಡಿನ ವಿಚಾರ ಎಂದು ಕೌಶಲ್ಯಾಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ನುಡಿದಿದ್ದಾರೆ.
ನಗರದ ಬಾಪೂಜಿ ವಿದ್ಯಾಸಂಸ್ಥೆಯ ರವೀಂದ್ರಕಲಾನಿಕೇತನದಲ್ಲಿ ಮಹಾತ್ಮಗಾಂಧಿ ದಿನಾಚರಣೆ ಆಂಗವಾಗಿ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯಕೇಂದ್ರ, ಶ್ರೀಶಾರದದೇವಿ ಕಣ್ಣಿನಆಸ್ಪತ್ರೆ ಮತ್ತು ಸಂಶೋಧನಾಕೇAದ್ರ, ಪಾವಗಡ, ಶ್ರೀಸಿದ್ದಗಂಗಾ ಆಸ್ಪತ್ರೆ ಮತ್ತು ವೈದ್ಯಕೀಯಕಾಲೇಜು, ತುಮಕೂರು ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಶೋಧನಾಕೇAದ್ರ ಮಹಾತ್ಮಗಾಂಧಿ ಅವರ 156ನೇ ಜನ್ಮಜಯಂತಿ ಹಾಗೂ ಕುಷ್ಠ ರೋಗಿಗಳಿಗೆ ನೂತನ ವಸ್ತç, ಸಾಧನ ಸಲಕರಣೆ, ಶುಚಿತ್ವಕಿಟ್ ಪಾದರಕ್ಷೆ ವಿತರಣಾಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಮಹಾತ್ಮಗಾಂಧಿ ಅವರ ನಿಸ್ವಾರ್ಥ ಸೇವೆ ಯುವಜನರಿಗೆ ಮಾದರಿಯಾಗಬೇಕು ಎಂದರು.
ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ, ಸಂವಿಧಾನಾತ್ಮಕ ಹಕ್ಕುಗಳು ಮಹಾತ್ಮಗಾಂಧಿ ಅವರ ಹೋರಾಟದಿಂದ ದೊರೆತ ಪ್ರತಿಫಲಗಳು,ಇಂತಹ ಪ್ರಾಮಾಣಿಕ ವ್ಯಕ್ತಿಯನ್ನು,ಅವರ ಸಾವಿನ ನಂತರ ಅತ್ಯಂತ ತುಚ್ಚವಾಗಿ ಕಾಣಲಾಗುತ್ತಿದೆ.ಅವರ ಬಗ್ಗೆ ಇಲ್ಲಸಲ್ಲದೆ ಹೇಳಿಕೆಗಳನ್ನು ನೀಡಲಾಗುತ್ತಿದೆ. ಗಾಂಧಿಯ ಮಾರ್ಗದಲ್ಲಿಯೇ ಅಶಕ್ತರು, ನಿರ್ಗತಿಕರು, ಬಡವರು, ರೋಗಿಗಳ ಸೇವೆ ಮಾಡುತ್ತಿರುವ ಪಾವಗಡದ ಶ್ರೀಜಪಾನಂದಜೀ ಅವರು,ಪದವಿ ಕಾಲೇಜು ಮಕ್ಕಳಿಗೆ ಬಿಸಿಯೂಟ, ಪ್ರಕೃತಿ ವಿಕೋಪಗಳಿಂದ ನೊಂದವರಿಗೆ ನೆರವು ನೀಡುತ್ತಿರುವ ಶ್ರೀಜಪಾನಂದಜೀ ಇತರೆ ಶ್ರೀಗಳಿಗಿಂತ ಭಿನ್ನವಾಗಿದ್ದಾರೆ ಎಂದು ಮುರುಳೀಧರ ಹಾಲಪ್ಪ ನುಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಶ್ರೀಜಪಾನಂದಜೀ ಆಶೀರ್ವಚನ ನೀಡಿ,ಇಂದು ನಮ್ಮ ಯುವಕರು ಸಿನಿಮಾ ನಟರನ್ನು ತಮ್ಮ ಮಾದರಿಯಾಗಿ ಸ್ವಿಕರಿಸಿದ್ದಾರೆ.ಇದರ ಫಲವಾಗಿ ದೇಶದಲ್ಲಿ ಶಾಂತಿ, ನೆಮ್ಮದಿ ಹಾಳಾಗಿದೆ.ದೇಶದಲ್ಲಿ ಮತ್ತೊಮ್ಮೆ ಶಾಂತಿ ನೆಮ್ಮದಿ ನೆಲೆಸಬೇಕೆಂದರೆ ನಾವು ಗಾಂಧಿತತ್ವಕ್ಕೆ ಮೊರೆ ಹೋಗಬೇಕಾದ ಅನಿವಾರ್ಯತೆಇದೆ.ನಾನು, ನನ್ನದು ಎಂಬ ಸ್ವಾರ್ಥ ಇಂದಿನ ಯುವಕರಲ್ಲಿ ಮನೆ ಮಾಡಿದೆ.ಭಾರತದ ಸ್ವಾತಂತ್ರಕ್ಕಾಗಿ ಮನೆ, ಮಠ ತೊರೆದು, ಹತ್ತಾರು ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ ಮಹಾತ್ಮಗಾಂಧಿಯವರನ್ನು ಅವಹೇಳನ ಮಾಡುವುದು ಈ ದೇಶಕ್ಕೆ ಭವಿಷ್ಯವಿಲ್ಲ ಎಂಬುದನ್ನು ತೋರಿಸುತ್ತದೆ ಎಂದರು.
ನಿಜವಾದ ಭಾರತವಿರುವುದು ಹಳ್ಳಿಗಳಲ್ಲಿ. ಇಂದಿಗೂ ಹಳ್ಳಿಯ ಜನ ಒಂದು ಹೊತ್ತಿನ ಕೂಳಿಗೆ ಪರಿತಾಪ ಪಡುತ್ತಿದ್ದಾರೆ. ಒಳ್ಳೆಯ ಆಸ್ಪತ್ರೆಗಳಿಲ್ಲ.ಇದ್ದರೂ ಗುಣಮಟ್ಟದ ಚಿಕಿತ್ಸೆಯಿಲ್ಲ.ಭರಿಸಲಾಗದ ಶುಲ್ಕದಿಂದ ರೋಗವನ್ನೇ ನುಂಗಿ ಜನ ಬದುಕುತಿದ್ದಾರೆ. ನಾವೆಲ್ಲರೂ ಗಾಂಧಿ ವಿಚಾರಧಾರೆಗಳಿಗೆ ಮತ್ತೆ ಮರಳಬೇಕಿದೆ ಎಂದು ಶ್ರೀಜಪಾನಂದಜೀ ತಿಳಿಸಿದರು.
ವೇದಿಕೆಯಲ್ಲಿ ಸಿದ್ದಗಂಗಾ ಆಸ್ಪತ್ರೆಯ ಡಾ.ಎಂ.ಎನ್.ಸಂಜೀವಕುಮಾರ್,ಡಾ.ಚಂದ್ರಕಲಾ.ಜಿ.ಆರ್, ಡಾ.ಅಭಿಷೇಕ್ ಡಿ, ಡಾ.ಕೀರ್ತಿಅಭಿಷೇಕ್, ಡಾ.ಸ್ವಾತಿ ಎಂ., ಶ್ರೀಮತಿ ಕೆ,ಶೋಭಾ, ಕೆ.ಜಯಶ್ರೀ, ಕೆ.ಎನ್.ಲಕ್ಷಿ, ಎಂ.ಎಸ್.ನಾಗರಾಜು, ವೀರೇಶ್ ಮತ್ತಿತರರು ಪಾಲ್ಗೊಂಡಿದ್ದರು.
ವರದಿ : ಕೆ ಬಿ ಚಂದ್ರಚೂಡ್
