ತುಮಕೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ತುಮಕೂರು ಗ್ರಾಮಾಂತರ ಯೋಜನಾ ಕಚೇರಿ ವ್ಯಾಪ್ತಿಯ ಹಿರೇತೋಟ್ಲುಕೆರೆ ಗ್ರಾಮದ ಭಾಗ್ಯಮ್ಮ ಕುಂಬಯ್ಯ ರವರ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ತುಮಕೂರು ಜಿಲ್ಲಾ ಜನಜಾಗೃತಿ ವೇದಿಕೆ ನೂತನ ಜಿಲ್ಲಾಧ್ಯಕ್ಷರಾದ ಕಾಮರಾಜ್ ರವರು ಮನೆಯ ಹಸ್ತಾಂತರ ಮಾಡಿ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃ ಶ್ರೀ ಹೇಮಾವತಿ ಅಮ್ಮನವರ ವಾತ್ಸಲ್ಯ ಕಾರ್ಯಕ್ರಮ ಕರ್ನಾಟಕದಲ್ಲಿ ನಿರ್ಗತಿಕರಿಗೆ ಸೂರನ್ನು ನೀಡುವ ಮೂಲಕ ಆಸರೆ ಆಗಿದೆ ಎಂದು ಹೇಳಿ ಶುಭ ಹಾರೈಸಿದರು.
ತುಮಕೂರು 1 ಜಿಲ್ಲೆಯ ನಿರ್ದೇಶಕರಾದ ಸತೀಶ್ ಸುವರ್ಣ ಮಾತನಾಡಿ ಈ ಜಿಲ್ಲೆಯಲ್ಲಿ ಕಳೆದ 13 ವರ್ಷಗಳಿಂದ ಸುಮಾರು 450 ಕೋಟಿಗಿಂತಲೂ ಹೆಚ್ಚಿನ ಅನುದಾನ ಕ್ಷೇತ್ರದಿಂದ ಲಭಿಸಿದೆ ಜಿಲ್ಲೆಯಲ್ಲಿ 60 ನೇ ವಾತ್ಸಲ್ಯ ಮನೇ ಹಸ್ತಾಂತರ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಲಕ್ಷ್ಮಿನರಸೇಗೌಡರು ಮಾತನಾಡಿ ಕ್ಷೇತ್ರ ದ ಕಾರ್ಯಕ್ರಮ ಮಾದರಿ ಉತ್ತಮ ಸಹಕಾರ ನೀಡಿ ಎಂದು ಶುಭ ಹಾರೈಸಿದರು.
ತಾಲೂಕಿನ ಯೋಜನಾಧಿಕಾರಿಗಳಾದ ಸಂದೇಶ್ ಪಿ.ಬಿ. ಗ್ರಾಮ ಪಂಚಾಯತ್ ಸದಸ್ಯರು ಹಾಗೂ ವಕೀಲರಾದ ಕುಮಾರಸ್ವಾಮಿ ಊರಿನ ಮುಖಂಡರಾದ ನರಸಿಂಹಮೂರ್ತಿ ಊರಿನ ಮುಖಂಡರಾದ ರಾಮೇಗೌಡ ಮಂಜುನಾಥ್ ಕರಿಗಿರಿ ನಾಯಕ ಮಲ್ಲಿಕಾರ್ಜುನ ಒಕ್ಕೂಟದ ಅಧ್ಯಕ್ಷರಾದ ರಾಮಚಂದ್ರ ಮಲ್ಲಿಕಾರ್ಜುನ ಹಾಗೂ ತಾಲೂಕಿನ ಜ್ಞಾನವಿಕಾಸ ಸಮನ್ವಯಧಿಕಾರಿಗಳಾದ ಧನಲಕ್ಷ್ಮೀ, ವಲಯದ ಮೇಲ್ವಿಚಾರಕರಾದ ಹೇಮಂತ್ ರವರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
