ತುಮಕೂರು:ಆಗ್ನೇಯ ಪಧವೀದರರ ಕ್ಷೇತ್ರವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಕ್ಷೇತ್ರದಾದ್ಯಂತ ಪದವಿಧರ ಮತದಾರರ ನೋಂದಣಿ ಕಾರ್ಯ ಆರಂಭಿಸಿದೆ. ಮುಂದಿನ ವರ್ಷ ನಡೆಯುವ ಚುನಾವಣೆಗೆ ಕನಿಷ್ಟ 1.20 ಲಕ್ಷ ಮತದಾರರನ್ನು ನೋಂದಣಿ ಮಾಡಲು ಗುರಿ ಹೊಂದಲಾಗಿದೆ,ಕಳೆದ ಬಾರಿ ಸಹ ಬಿಜೆಪಿ ಪಕ್ಷದ ಅಭ್ಯರ್ಥಿ ಜಯಗಳಿಸಿದ್ದರುಈ ಬಾರಿ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರರವರ ಸೂಚನೆ ಮೇರೆಗೆ ಇಂದಿನಿಂದ ಮತದಾರರ ನೋಂದಣಿಗೆ ತುಮಕೂರಿನಲ್ಲಿ ಚಾಲನೆ ನೀಡುತ್ತಿದ್ದೇವೆ ಎಂದು ರಾಜ್ಯ ಬಿಜೆಪಿ ಕಾನೂನು ಮೋರ್ಚಾ ಸಂಚಾಲಕ ವಸಂತಕುಮಾರ್ ಹೇಳಿದರು.
ಮಂಗಳವಾರ ಬಿಜೆಪಿ ಮುಖಂಡರು ಸಿದ್ಧಗಂಗಾ ಮಠದಲ್ಲಿ ಡಾ.ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದು ಜಿಲ್ಲೆಯಲ್ಲಿ ಪಧವೀದರರ ಮತದಾರರ ನೋಂದಣಿಕಾರ್ಯ ಆರಂಭಿಸಿದರು.
ನಂತರ ನಗರದಲ್ಲಿ ಮುಖಂಡರ ಸಭೆ ನಡೆಸಿ ಆಗ್ನೇಯ ಪದವೀಧರ ಕ್ಷೇತ್ರವನ್ನು ಬಿಜೆಪಿಗೆ ಉಳಿಸಿಕೊಳ್ಳಲು ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ನೋಂದಣಿ ಮಾಡಿಸಲು ಶ್ರಮಿಸಬೇಕು ಎಂದು ವಸಂತಕುಮಾರ್ ಕೋರಿದರು.
ತಾವು ಆಗ್ನೇಯ ಪದವಿಧರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷದ ರಾಜ್ಯ ನಾಯಕರ ಸೂಚನೆ ಮೇರೆಗೆ ಕ್ಷೇತ್ರದಲ್ಲಿ ಮತದಾರರ ನೋಂದಣಿ ಕಾರ್ಯ ಆರಂಭಿಸಿರುವುದಾಗಿ ಹೇಳಿದ ಅವರು, 1.20 ಲಕ್ಷ ಮತದಾರರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ ಎಂದರು.
ಈ ವಿಧಾನ ಪರಿಷತ್ ಚುನಾವಣೆಯಲ್ಲಿ ಸಂವಿಧಾನ ಕೊಟ್ಟಿರುವ ಮತದಾನದ ಹಕ್ಕನ್ನು ಪಧವೀದರರು ಚಲಾಯಿಸಬೇಕು.ಅದಕ್ಕಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು.ಈ ಮೊದಲು ಮತಚಲಾಯಿಸಿದವರೂ ಮತ್ತೆ ಈ ಬಾರಿಯೂ ನೊಂದಣಿ ಮಾಡಿಸಬೇಕು.ನಮೂನೆ 18ರಅರ್ಜಿಯನ್ನು ಪಕ್ಷದಿಂದ ವಿತರಣೆ ಮಾಡಲಾಗುತ್ತಿದೆ.ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಆಯಾ ತಾಲ್ಲೂಕಿನ ಚುನಾವಣಾ ಶಾಖೆಗೆ ಅರ್ಜಿ ಸಲ್ಲಿಸಿ ನೋಂದಾವಣೆ ಮಾಡಿಸುವಂತೆ ವಸಂತಕುಮಾರ್ ಮನವಿ ಮಾಡಿದರು.
ಆಗ್ನೇಯ ಪದವಿಧರ ಕ್ಷೇತ್ರದಲ್ಲಿ ಸ್ವಯಂ ಉದ್ಯೋಗಗಳಿಗೆ ಪ್ರೋತ್ಸಾಹ, ಉದ್ಯೋಗಗಳ ಸೃಷ್ಟಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಕೇಂದ್ರ ಸ್ಥಾಪಿಸುವ ಮೂಲಕ ಅವರು ಉನ್ನತ ಸ್ಥಾನ ಪಡೆಯಲು ನೆರವಾಗುವುದೂ ಸೇರಿದಂತೆ ಪದವೀಧರರ ಬದುಕು ರೂಪಿಸುವಂತಹ ಯೋಜನೆಗಳನ್ನು ಜಾರಿಗೆ ತರಬೇಕಾಗಿದೆ ಎಂದು ಹೇಳಿದರು.
ಜಿಲ್ಲೆಯ ಬಿಜೆಪಿಯ ವಿವಿಧ ಮೋರ್ಚಾಗಳ ಮುಖಂಡರು, ಕಾರ್ಯಕರ್ತರು ಪದವೀಧರರ ನೋಂದಣಿಗೆ ಶ್ರಮವಹಿಸಿ ಕೆಲಸ ಮಾಡಬೇಕು.ಪದವಿಧರರನ್ನು ಗುರುತಿಸಿ ಅವರು ಮತದಾರರ ಪಟ್ಟಿಯಲ್ಲಿ ಸೇರುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ವೈ.ಹೆಚ್.ಹುಚ್ಚಯ್ಯ,ಜಿಲ್ಲಾ ಬಿಜೆಪಿ ಕಾನೂನು ಮೋರ್ಚಾ ಸಂಚಾಲಕ ಸಿ.ಎಸ್.ಕುಮಾರಸ್ವಾಮಿ, ರಾಜ್ಯ ಮೋರ್ಚಾ ಸದಸ್ಯ ಹಿಮಾನಂದ್, ಜಿಲ್ಲಾ ಬಿಜೆಪಿ ವಕ್ತಾರ ಟಿ.ಆರ್.ಸದಾಶಿವಯ್ಯ, ಮುಖಂಡರಾದ ಡಾ.ನಟರಾಜು, ವಕೀಲರಾದ ಸುರೇಶ್ಕುಮಾರ್ ಮೊದಲಾದವರು ಭಾಗವಹಿಸಿದ್ದರು.
ವರದಿ : ಕೆ ಬಿ ಚಂದ್ರಚೂಡ್
