ತುಮಕೂರು:ಹದಿನಾರನೇ ಶತಮಾನದ ಕನಕದಾಸರ ಕೀರ್ತನೆ “ತಲ್ಲಣಸದಿರುವ ಮನವೇ” ಎಂಬ ಶೀರ್ಷಿಕೆಯೊಂದಿಗೆ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ವತಿಯಿಂದ ಜನರಲ್ಲಿ ವೈಚಾರಿಕ, ವೈಜ್ಞಾನಿಕ ಪ್ರಜ್ಞೆ ಮೂಡಿಸುವುದರ ಜೊತೆಗೆ, ಇಂದಿನ ತಲ್ಲಣಗಳಿಗೆ ಎದುರಾಗಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ವಿನೂತನ ಸಂಸ್ಕೃತಿ ಚಿಂತನ ಚಾರಣ ಕಾರ್ಯಕ್ರಮವನ್ನು ಇದೇ ಮೊದಲ ಬಾರಿಗೆ ತುಮಕೂರಿನಲ್ಲಿ ಡಿಸೆಂಬರ್ 27 ಶನಿವಾರ ಶ್ರೀದೇವಿ ಮೆಡಿಕಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠ್ಟಿಯಲ್ಲಿಂದು ಮಾತನಾಡಿದ ಅವರು,ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಜಾತಿ, ವರ್ಗ, ವರ್ಣ, ಲಿಂಗ ಭೇಧವಿಲ್ಲದೆ ಎಲ್ಲಾ ಸಮುದಾಯಗಳ, ಅದರಲ್ಲಿಯೂ ಹಿಂದುಳಿದ ಸಮುದಾಯಗಳ ಸಾಮಾಜಿಕ ಏಳಿಗೆಗೆ ನಿರಂತರವಾಗಿ ಪ್ರಯತ್ನಿಸುತ್ತಿದ್ದು ಇದರ ಮುಂದುವರೆದ ಭಾಗವೇತಲ್ಲಣ್ಣಿಸದಿರು ಮನವೆ ಕಾರ್ಯಕ್ರಮವಾಗಿದೆ ಎಂದರು.
ನಮ್ಮ ಶ್ರೀದೇವಿ ಶಿಕ್ಷಣ ಸಂಸ್ಥೆಯೂ ಕಳೆದ ವರ್ಷಗಳಿಂದ ಅತಿ ಹೆಚ್ಚು ಅಂಕ ಪಡೆದ ಕುರುಬ ಸಮುದಾಯದ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಕೈಗೆತ್ತಿಕೊಂಡಿದೆ.ಇದಕ್ಕಾಗಿ ಪ್ರತಿವರ್ಷ ಎರಡು ಕೋಟಿ ರೂಗಳನ್ನು ಮೀಸಲಿರಿಸಿದೆ.ಇಂತಹ ಕಾರ್ಯಕ್ರಮಗಳು ಹೆಚ್ಚು ಜನರಿಗೆ ತಲುಪುವಂತಾಗಬೇಕು ಎಂದು ಡಾ.ಹುಲಿನಾಯ್ಕರ್ ನುಡಿದರು.

ಡಿಸೆಂಬರ್ 27 ರ ಶನಿವಾರ ನಡೆಯುವ ತಲ್ಲಣಿಸದಿರು ಮನವೇ ಸಂಸ್ಕೃತಿ ಚಿಂತನ ಚಾರಣ ಕಾರ್ಯಕ್ರಮ ಕುರಿತು ಮಾತನಾಡಿದ ಕಾರ್ಯಕ್ರಮದ ಸಂಯೋಜಕರಾದ ಡಾ.ಮಂಜಪ್ಪ ಮಾತಗೋಡಿ,ತಲ್ಲಣದಲ್ಲಿರುವ ಯುವ ಮನಸ್ಸುಗಳಿಗೆ ತಿಳಿ ಹೇಳುವ ನಿಟ್ಟಿನಲ್ಲಿ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ತಲ್ಲಣಿಸದಿರುವ ಮನವೇ ಕಾರ್ಯಕ್ರಮ ಬಹಳ ಮೆಚ್ಚುಗೆ ಪಡೆದಿದೆ.ಇದುವರೆಗೂ ನಾಲ್ಕು ಕಾರ್ಯಕ್ರಮಗಳ ಜರುಗಿದ್ದು, ಇದು 5ನೇ ಕಾರ್ಯಕ್ರಮವಾಗಿದೆ.ಇದರ ಜೊತೆಗೆ ಎಲ್ಲಾ ಸಮುದಾಯದ ಐಟಿ ಮತ್ತು ಬಿಟಿ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದು ಕನಿಷ್ಠ ಮೂರು ವರ್ಷವಾದರೂ ಉದ್ಯೋಗ ದೊರೆಯದೆ ಇರುವ ನಿರುದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು,ರೀನಿ ಟೆಕ್ನಾಲಜಿ ಸಹಯೋಗದಲ್ಲಿ ಅಭ್ಯರ್ಥಿಗಳ ಬೌದ್ಧಿಕ ಮಟ್ಟಕ್ಕೆ ಮಠದಿಂದ ಉಚಿತ ಊಟ, ವಸತಿಯೊಂದಿಗೆೆ ಎಂ.ಎನ್.ಸಿ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಆರ್ಹರಾಗುವ ಕೌಶಲ್ಯಗಳಿಸಲು ಉದ್ಯೋಗ ಸಿರಿ ಎಂಬ ತರಬೇತಿ ನೀಡಲು ಕನಕ ಗುರುಪೀಠ ನಿರ್ಧರಿಸಿದೆ.ಎಲ್ಲಾ ಸಮುದಾಯದ ಆಸಕ್ತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಸ್ಥಳದಲ್ಲಿಯೇ ಹೆಸರು ನೊಂದಾಯಿಸಿಕೊಳ್ಳಬಹುದು ಎಂದರು.
ಡಿಸೆಂಬರ್ 27 ರ ಶನಿವಾರ ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾ.ಶ್ರೀವೀರೇಶಾನಂದ ಸರಸ್ವತಿ ಸ್ವಾಮೀಜಿ ವಹಿಸಲಿದ್ದು ಶ್ರೀ ನಿರಂಜನಾನಂದಪುರಿ ಸ್ವಾಮಿಜಿ ಡಾ.ಜಿ.ಪರಮೇಶ್ವರ್ ಉದ್ಘಾಟಿಸುವರು ದಿನೇಶ್ಅಮೀನ್ ಮಟ್ಟು ಪ್ರೊ.ನಾಗೇಂದ್ರ ಕುಮಾರ್.ಬಿ.ಸಿ. ಜಿ.ಶ್ರೀನಿವಾಸ್ ಉಪಸ್ಥಿತರುರುವರು. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯ ಭಾಂಧವರು, ಸಾರ್ವಜನಿಕರು, ಉದ್ಯೋಗಾಕಾಂಕ್ಷಿಗಳು ಭಾಗವಹಿಸಿ ಯಶಸ್ವಿಗೊಳಿಸುವಂತೆ ಡಾ.ಮಂಜಪ್ಪ ಮಾಗೋಡಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಡಾ.ರಮಣ್ ಹುಲಿನಾಯ್ಕರ್, ಡಾ.ಲಾವಣ್ಯ ಶ್ರೀ ಬಿಂದುಶೇಖರ್ಓಡೆಯರ್, ಟಿ.ಇ.ರಘುರಾಮ್, ಕೆಂಪರಾಜು,ಮುಖಂಡರಾದಎಂ.ಧರ್ಮರಾಜ್, ಸುನಿತ ನಟರಾಜ್,ರೇಣುಕಾ ಪ್ರಸಾದ್, ಲಕ್ಷ್ಮೀನರಸಿಂಹರಾಜು, ಇಂದ್ರಕುಮಾರ್,ಬಸವರಾಜು, ಚಿಕ್ಕಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
