ತುಮಕೂರು: ಬೆಳಗಾವಿಯ ತಾಂತ್ರಿಕ ಶಿಕ್ಷಣ ವಿದ್ಯಾಲಯದ ಬೋಧನಾ ಮತ್ತು ಪಠ್ಯಕ್ರಮ ಜಗತ್ತಿಗೆ ಮಾದರಿಯಾಗಿದೆ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಗೌರವಾನ್ವಿತ ಕುಲಪತಿಯಾದ ಪ್ರೊ.ವಿದ್ಯಾಶಂಕರ್.ಎಸ್. ರವರು ಅಭಿಪ್ರಾಯಪಟ್ಟಿದ್ದಾರೆ.
ನಗರದ ಶಿರಾರಸ್ತೆಯ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಶ್ರೀದೇವಿ ಕಾಲೇಜಿನ ಆವರಣದಲ್ಲಿ ಶ್ರೀಉತ್ಸವ-2026 ಸಾಂಸ್ಕೃತಿಕ ಹಬ್ಬದ ಸಮಾರಂಭವನ್ನು ಉದ್ಘಾಟಿಸಿ ಪ್ರೊ.ವಿದ್ಯಾಶಂಕರ್.ಎಸ್.ರವರು ಮಾತನಾಡುತ್ತಾ ಕೃತಕ ಬುದ್ಧಿಮತ್ತೆ ಬೆಳೆದಷ್ಟು ಉದ್ಯೋಗಾವಕಾಶಗಳು ಕಡಿಮೆಯಾಗಲಿದೆ. ಎಂಬ ಆತಂಕದಲ್ಲಿ ಸತ್ಯಾಂಶವಿಲ್ಲ ಆದರೆ ಕೃತಕ ಬುದ್ಧಿಮತ್ತೆಯನ್ನು ಮೀರಿ ಬೆಳೆಯುವಂತಹ ಅವಕಾಶಗಳನ್ನು ನಾವು ಸೃಷ್ಟಿಸಿಕೊಳ್ಳದೆ ಹೋದಲ್ಲಿ ಮನುಷ್ಯ ಬೇಡವಾದ ವಸ್ತುವಾಗುತ್ತಾನೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಹೀಗಾಗಿ 2030ರ ವೇಳೆಗೆ ಕೃತಕ ಬುದ್ಧಿಮತ್ತೆಯನ್ನು ನಿಯಂತ್ರಿಸಲು ಇಂದಿನಿಂದಲೇ ನಮ್ಮ ಪ್ರಯತ್ನಗಳನ್ನು ಮತ್ತು ಹೊಸ ಹೊಸ ಅಲೋಚನೆ, ಸಂಶೋಧನೆ ಮತ್ತು ನಾವೀನ್ಯತೆಗೆ ಹೆಚ್ಚು ಗಮನಕೊಡಬೇಕು. ಬರುವ 2030ರ ವೇಳೆಗೆ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಈಗ ಮಾಡುತ್ತಿರುವ ಕೆಲಸಗಳು ಇರುವುದಿಲ್ಲ ಬದಲಾಗಿ ಹೊಸ ಹೊಸ ಉದ್ಯೋಗಗಳು ಹುಟ್ಟಿಕೊಳ್ಳುತ್ತವೆ. ಜಗತ್ತಿನಲ್ಲಿ ಜ್ಞಾನಕ್ಕಿಂತ ದೊಡ್ಡದು ಯಾವುದೂ ಇಲ್ಲ ವಿದ್ಯಾರ್ಥಿಗಳು ಗುರಿಯೊಂದಿಗೆ ಜ್ಞಾನ ಸಂಪಾದನೆ-ಸಾಧನೆಗೆ ಗಮನ ಕೊಡಬೇಕು ಎಂದರು.
ಗ್ರೀನ್ವೇ ಹೆಲ್ತ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾದ ಎನ್.ಎಲ್.ಎಸ್.ಮೂರ್ತಿ, ಜಾಗತಿಕ ತಂತ್ರಜ್ಞಾನ ಮತ್ತು ಸ್ವತಂತ್ರ ನಿರ್ದೇಶಕರು ಮತ್ತು ಮುಖ್ಯಸ್ಥರಾದ ಸಿ.ಎನ್.ಮಹಾಂತೇಶ್ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್ರವರು ತಾಂತ್ರಿಕ ಶಿಕ್ಷಣದಲ್ಲಿ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ ಅತ್ಯುತ್ತಮ ಕೆಲಸ ಮಾಡಿದೆ. ಮಾಡುತ್ತಲೂ ಇದೆ. ಅದರ ಪಠ್ಯಕ್ರಮಕ್ಕೆ ಅಂತಾರಾಷ್ಟಿçÃಯ ಮಾನ್ಯತೆ, ಬೇಡಿಕೆ ಹೆಚ್ಚಾಗುತ್ತಿರುವುದು ತಾಂತ್ರಿಕ ಶಿಕ್ಷಣದಲ್ಲಿ ದೇಶದ ಸಾಧನೆ ಬೇರೆಯವರಿಗೆ ಮಾದರಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಟ್ರಸ್ಟಿಯಾದ ಶ್ರೀಮತಿ.ಅಂಬಿಕಾ ಎಂ ಹುಲಿನಾಯ್ಕರ್ ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶಕರಾದ ಎಂ.ಎಸ್.ಪಾಟೀಲ್ ಮಾತನಾಡಿದರು. ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ನರೇಂದ್ರ ವಿಶ್ವನಾಥ್ರವರು ಸ್ವಾಗತಿಸಿ ವಾರ್ಷಿಕ ವರದಿಯನ್ನು ಮಂಡಿಸಿದರು.
ಟ್ರಸ್ಟಿಗಳಾದಯಾದ ಡಾ.ರಮಣ್ ಹುಲಿನಾಯ್ಕರ್, ಡಾ.ಲಾವಣ್ಯ, ಡಾ.ಎನ್.ಚಂದ್ರಶೇಖರ್, ಡಾ.ಕಿರಣ್.ಜಿ.ಎಂ.ಪ್ರೊ.ಎಂ.ಎಸ್.ಚೇತನ್ ರವರು ಉಪಸ್ಥಿತರಿದ್ದರು.