ತುಮಕೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಜಿಲ್ಲೆಯ ಮಡಿವಾಳ ಬಂಧುಗಳು ಧರ್ಮದ 8ನೇ ಕಾಲಂನಲ್ಲಿ ಹಿಂದೂ ಎಂದು, ಜಾತಿಯ 9ನೇ ಕಾಲಂನಲ್ಲಿ ‘ಮಡಿವಾಳ’ ಎಂದು ನಮೂದಿಸಬೇಕು ಎಂದು ನಗರದ ಮಾಚಿದೇವ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಶಾಂತಕುಮಾರ್ ರವರು ಮಡಿವಾಳ ಸಮುದಾಯದ ಭಾಂದವರಲ್ಲಿ ಮನವಿ ಮಾಡಿದ್ದಾರೆ.
ಮಡಿವಾಳ ಜಾತಿಯ ಕೋಡ್ ಸಂಖ್ಯೆ ಎ-0903 ಎಂದು ಹೇಳಿ ಮಡಿವಾಳ ಜಾತಿ ಬರೆಸಿರಿ. ಹಾಗೇ ಉಪಜಾತಿ ಕಾಲಂ ನಂ.10ರಲ್ಲಿಯೂ ಮಡಿವಾಳ ಎಂದೇ ಬರೆಸಬೇಕು. ಈ ಮಾಹಿತಿ ದಾಖಲಿಸುವುದರಿಂದ ರಾಜ್ಯದಲ್ಲಿ ನಮ್ಮ ಜಾತಿಯ ಜನಸಂಖ್ಯೆ ಸರ್ಕಾರದಲ್ಲಿ ದಾಖಲಾಗಿ ನಮಗೆ ದೊರೆಯಬಹುದಾದ ಮೀಸಲಾತಿ ಹಾಗೂ ಪೂರಕ ಸೌಲಭ್ಯಗಳು ದೊರೆಯುತ್ತವೆ ಎಂದು ಹೇಳಿದ್ದಾರೆ.
ವರದಿ : ಕೆ ಬಿ ಚಂದ್ರಚೂಡ್
