ತುಮಕೂರು : ಇಡೀ ವಿಶ್ವ ಮಹಾತ್ಮಗಾಂಧಿಯವರನ್ನು ಸತ್ಯ ಮತ್ತು ಅಹಿಂಸೆಯ ಪ್ರತಿರೂಪವಾಗಿ ನೋಡುತ್ತಿದೆ. ಆದರೆ ನಮ್ಮ ದೇಶ ಕೆಲ ಸೋಷಿಯಲ್ ಮೀಡಿಯಾಗಳು ಗಾಂಧಿಯ ವಿರುದ್ಧ ನಿರಂತರ ಅಪಪ್ರಚಾರ ಮಾಡುತ್ತಾ, ಗಾಂಧಿಯನ್ನು ಕೊಂದಂತೆ, ಗಾಂಧೀಜೀ ವಿಚಾರಧಾರೆಗಳನ್ನು ಕೊಲ್ಲುವ ಪ್ರಯತ್ನ ನಡೆಸುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದು ಬೆಂಗಳೂರು ಗಾಂಧಿ ಭವನದ ಅಧ್ಯಕ್ಷರಾದ ನಾಡೋಜ ವೋಡೆ.ಪಿ.ಕೃಷ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಬಾಪೂಜಿ ವಿದ್ಯಾಸಂಸ್ಥೆಯ ರವೀಂದ್ರ ಕಲಾನೀಕೇತನದ ಹೆಚ್.ಎಂ.ಗಂಗಾಧರಯ್ಯ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿದ್ದ ಸರ್ವೋದಯ ದಿನಾಚರಣೆ,ಮಹಾತ್ಮಗಾಂಧಿ ಆತ್ಮಕಥನ ನನ್ನ ಸತ್ಯಾನ್ವೇಷಣೆ ಮಹಾ ಕೃತಿಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಗಾಂಧಿವಾದಿ ಎಂ.ಬಸವಯ್ಯ ವಿರಚಿತ “ಸತ್ಯಾನ್ವೇಷಣೆ” ಹಾಗೂ “ಫಾತಕ ಲೋಕದಿಂದ ಗಾಂಧಿಯಾನದೆಡೆಗೆ” ಕೃತಿಗಳನ್ನು ಬಿಡುಡಗೆ ಮಾಡಿ ಮಾತನಾಡುತಿದ್ದ ಅವರು,ಯುವಜನರು ಸಹ ಏಕಾಗ್ರತೆಯಕೊರತೆಯಿಂದ ಸತ್ಯ,ಸುಳ್ಳುಗಳ ವಿಮರ್ಶೆ ಮಾಡದೆ ನಡೆದು ಕೊಳ್ಳುತ್ತಿದ್ದಾರೆ.ಇಂತಹ ಯುವಜನರಿಗೆ ಎಂ.ಬಸವಯ್ಯಅವರು ಬರೆದಿರುವ ನನ್ನ ಸತ್ಯಾನ್ವೇಷಣೆ ಕೃತಿ ಗಾಂಧಿಜೀಯ ಬದುಕಿನ ವಿವಿಧ ಮಜಲುಗಳನ್ನು ತೋರಿಸಲಿದೆ ಎಂದರು.
ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ,ಗಾಂಧೀಜಿಯನ್ನು ಯುವಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಎಂ.ಬಸವಯ್ಯ ಅವರು ಬರೆದಿರುವ ಸತ್ಯಾನ್ವೇಷಣೆ ಹಾಗೂ ಡಾ.ಹೆಚ್.ಎಸ್.ಸುರೇಶ್ ಅವರು ಬರೆದಿರುವ ಘಾತಕ ಲೋಕದಿಂದ ಗಾಂಧಿಯಾನದೆಡೆಗೆ ಎರಡು ಪುಸ್ತಕಗಳನ್ನು ಜಿಲ್ಲೆಯ ಪ್ರತಿ ಶಾಲಾ,ಕಾಲೇಜುಗಳ ಗ್ರಂಥಾಲಯಗಳಲ್ಲಿ ದೊರೆಯುವಂತೆ ಮಾಡಲಿದ್ದೇವೆ.ಅಲ್ಲದೆ ಜಿಲ್ಲಾಕಾರಾಗೃಹದ ಖೈದಿಗಳಿಗೂ ನೀಡಲಾಗುವುದು.ಇಂತಹ ಕಾರ್ಯಕ್ರಮದಲ್ಲಿ ಹೆಚ್ಚು ಯುವಜನರು ಪಾಲ್ಗೊಳ್ಳುವಂತೆ ಮಾಡಲಾಗುವುದು.ಯುವಜನರನ್ನು ಮಹಾತ್ಮಗಾಂಧಿಜೀ ಸಂದೇಶದ ರಾಯಭಾರಿಗಳಾಗಿ ಕೆಲಸ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಬಸವಯ್ಯ ವಹಿಸಿದ್ದರು. ಪ್ರೊ.ಜಿ.ಬಿ.ಶಿವರಾಜು, ನರೇಂದ್ರ, ಸಿ.ಯತಿರಾಜು, ಭಾಗ್ಯಮ್ಮ ಬಸವಯ್ಯ, ಉಪನ್ಯಾಸಕರಾದ ಗೋವಿಂದಯ್ಯ,ಸುಮಂಗಲ ಜೇಮ್ಸ್, ಪ್ರೊ.ಸಿದ್ದಿಬಾಬು, ಚಿದಾನಂದಸ್ವಾಮಿ.ಜಿ,ಬಿಂದುಶ್ರೀ, ಸುರೇಶ್ ಮತ್ತಿತರರು ಉಪಸ್ಥಿತರರಿದ್ದರು.
ವರದಿ : ಕೆ ಬಿ ಚಂದ್ರಚೂಡ್
