ತುಮಕೂರು:ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ.ಡಿ.ವೀರೇಂದ್ರಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ವಿ.ಹೆಗ್ಗಡೆಯವರು ಧರ್ಮಸ್ಥಳ ಕ್ಷೇತ್ರದಿಂದ ನೀಡಿದ ದಿನಬಳಕೆ ವಸ್ತುಗಳು, ವಾತ್ಸಲ್ಯ ಕಿಟ್ ಮತ್ತು ಪಾತ್ರೆ ಕಿಟ್ ಅನ್ನು ತುಮಕೂರು ಯೋಜನಾ ವ್ಯಾಪ್ತಿಯ 9 ಜನ ಮಸಾಶನ ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು.
ತುಮಕೂರು 1 ಜಿಲ್ಲೆಯ ನಿರ್ದೇಶಕರಾದ ಸತೀಶ್ ಸುವರ್ಣ,ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಅಮರಾನಾಥ್ ಶೆಟ್ಟಿ,ಯೋಜನಾಧಿಕಾರಿ ಪ್ರಭ, ತುಮಕೂರು ತಾಲೂಕಿನ ಯೋಜನಾಧಿಕಾರಿ ಪ್ರಭಾಕರ್, ಜ್ಞಾನವಿಕಾಸ ಸಮನ್ವಯಾಧಿಕಾರಿ ರೇಖಾ,ನಾಗಮಣಿ. ವಲಯದ ಮೇಲ್ವಿಚಾರಕರು, ಸೇವಾಪ್ರತಿನಿಧಿ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
