ಅರಕಲಗೂಡು: ವಿದ್ಯುತ್ ಶಾಕ್ನಿಂದ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ತಾಲೂಕಿನ ಗರಿಘಟ್ಟ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಹುಲಿಕಲ್ ಹೋಬಳಿ ಸಿದ್ದಾಪುರ ಗ್ರಾಮದ ಸೃಜನ್ (19), ಸುಭಾಷ್ ನಗರದ ಸಂಜಯ್ (19) ಮೃತ ಯುವಕರು.

ಈ ಇಬ್ಬರೂ ಮಹೇಂದ್ರ ಎಂಬುವವರ ನೂತನ ಮನೆಯ ಮರಗೆಲಸಕ್ಕೆಂದು ಬಂದಿದ್ದರು. ಈ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿದೆ.

ಕರೆಂಟ್ ಶಾಕ್ ಗಂಭೀರವಾಗಿದ್ದರಿಂದ ಕೂಲಿಗೆ ಬಂದಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಅಸು ನೀಗಿದ್ದಾರೆ.
ಅರಕಲಗೂಡು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
