ಉಡುಪಿ: ರಾಜ್ಯದ ಮೊದಲ ಅನಾಥ ಮಾನಸಿಕ ರೋಗಿಗಳ ಚಿಕಿತ್ಸೆ ಕೇಂದ್ರ ಶೀಘ್ರ ಆರಂಭ

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಎಮರ್ಜೆನ್ಸಿ ಕೇರ್‌ ಮತ್ತು ರಿಕವರಿ ಸೆಂಟರ್ (ICRC) ಶೀಘ್ರವೇ ಆರಂಭವಾಗಲಿದೆ. ಇದು ರಾಜ್ಯದ ಮೊದಲ ಅನಾಥ ಮಾನಸಿಕ ರೋಗಿಗಳ ಚಿಕಿತ್ಸಾ ಮತ್ತು ಆರೈಕೆ ಕೇಂದ್ರ ಆಗಿದ್ದು, ಚಿಕಿತ್ಸೆ, ಸಾಂತ್ವನ ಮತ್ತು ಸಬಲೀಕರಣ ಒದಗಿಸುವುದು ಉದ್ದೇಶ.