ನವದೆಹಲಿ/ಬೆಂಗಳೂರು, ಡಿಸೆಂಬರ್ 3 : ದೇಶದೆಲ್ಲೆಡೆ ಮನೆ ಬಾಡಿಗೆ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಲು ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದ್ದು, ‘ಮಾದರಿ ಬಾಡಿಗೆ ಕಾಯ್ದೆ’ (Model Tenancy Act) ಆಧಾರದ ಮೇಲೆ 2025ರ ಹೊಸ ಬಾಡಿಗೆ ನಿಯಮಗಳನ್ನು ಸಿದ್ಧಪಡಿಸಿದೆ. ಈ ನಿಯಮಗಳನ್ನು ರಾಜ್ಯ ಸರ್ಕಾರಗಳು ಅಂಗೀಕರಿಸಿದ ತಕ್ಷಣ ಜಾರಿಗೆ ಬರುತ್ತವೆ. ಬೆಂಗಳೂರಿನಂತಹ ಮೆಟ್ರೋ ನಗರಗಳಲ್ಲಿ ಬಾಡಿಗೆದಾರರು ಎದುರಿಸುತ್ತಿದ್ದ ಅನೇಕ ಸಂಕಷ್ಟಗಳಿಗೆ ಇದು ದೊಡ್ಡ ಪರಿಹಾರವೆಂದು ಆಶಿಸಲಾಗಿದೆ.
ಮುಖ್ಯ ಬದಲಾವಣೆಗಳು:
1. ಕೇವಲ 2 ತಿಂಗಳ ಅಡ್ವಾನ್ಸ್ ಮಾತ್ರ
ಬೆಂಗಳೂರಿನಲ್ಲಿ 6 ರಿಂದ 10 ತಿಂಗಳ ಮುಂಗಡ ಕೇಳುವ ಪದ್ಧತಿಗೆ ಇಲ್ಲಿಗೆ ತೆರೆ ಬೀಳುತ್ತಿದೆ.
2025ರ ನಿಯಮದ ಪ್ರಕಾರ:
-
ವಸತಿ ಮನೆಗಳಿಗೆ ಗರಿಷ್ಠ 2 ತಿಂಗಳ ಬಾಡಿಗೆ ಮಾತ್ರ ಭದ್ರತಾ ಠೇವಣಿ
-
ವಾಣಿಜ್ಯ ಕಟ್ಟಡಗಳಿಗೆ 6 ತಿಂಗಳ ಬಾಡಿಗೆ ಗಡುವು
ಇದರಿಂದ ಐಟಿ ಉದ್ಯೋಗಿಗಳು ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ಮಟ್ಟದ ನೆರವು ದೊರೆಯಲಿದೆ.
2. ಬಾಡಿಗೆ ಒಪ್ಪಂದ ನೋಂದಣಿ ಕಡ್ಡಾಯ
ಒಪ್ಪಂದವನ್ನು ಬಾಯಿ ಮಾತಿನಲ್ಲಿ ಮಾಡುವ ಯುಗ ಮುಗಿದಿತು.
-
ಪ್ರತಿಯೊಂದು ಬಾಡಿಗೆ ಒಪ್ಪಂದವನ್ನು 2 ತಿಂಗಳೊಳಗೆ ಆನ್ಲೈನ್ ಅಥವಾ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಾಯಿಸಬೇಕಾಗುತ್ತದೆ.
-
ನಿಯಮ ಉಲ್ಲಂಘನೆ ಮಾಡಿದರೆ ₹5,000 ದಂಡ.
-
ಸರ್ಕಾರದ ನಿಗದಿತ ಟೆಂಪ್ಲೇಟ್ ಅಡಿಯಲ್ಲಿ ಮಾತ್ರ ಒಪ್ಪಂದ—ಮಾಲೀಕರ ಇಚ್ಛೆಯ ಷರತ್ತುಗಳಿಗೆ ಅವಕಾಶವಿಲ್ಲ.
ಇದನ್ನು ಓದಿ: ಕಾಬೂಲ್ : 13 ಜನರನ್ನು ಕೊಂದವನನ್ನು ಮೈದಾನದಲ್ಲಿ 80 ಸಾವಿರ ಜನರ ಎದುರು ಗುಂಡಿಕ್ಕಿ ಕೊಂದ ತಾಲಿಬಾನ್ ಆಡಳಿತ
3. ಬಾಡಿಗೆ ಏರಿಕೆ ನಿಯಂತ್ರಣ
-
ವರ್ಷದಲ್ಲೊಮ್ಮೆ ಮಾತ್ರ ಬಾಡಿಗೆ ಏರಿಕೆ.
-
ಅದರ ಮೊದಲು ಬಾಡಿಗೆದಾರರಿಗೆ 90 ದಿನ ಮುಂಚಿತ ನೋಟಿಸ್ ಕಡ್ಡಾಯ.
4. ಡಿಜಿಟಲ್ ಪಾವತಿ ಕಡ್ಡಾಯ
-
ತಿಂಗಳಿಗೆ ₹5,000 ಕ್ಕಿಂತ ಹೆಚ್ಚಿನ ಬಾಡಿಗೆಯನ್ನು UPI ಅಥವಾ ಬ್ಯಾಂಕ್ ಮೂಲಕವೇ ಪಾವತಿ.
-
₹50,000 ಕ್ಕಿಂತ ಮೇಲಿದೆ ಎಂದರೆ TDS ಕಡಿತ ಅನ್ವಯ.
5. ಬೆಂಗಳೂರು–ಮುಂಬೈ ಮೇಲೆ ಪರಿಣಾಮ
ಬೆಂಗಳೂರು:
ಎಚ್ಎಸ್ಆರ್, ವೈಟ್ಫೀಲ್ಡ್, ಹೆಬ್ಬಾಳ ಮೊದಲಾದ ಪ್ರದೇಶಗಳಲ್ಲಿ ಕೋಟ್ಯಾಂತರ ಅಡ್ವಾನ್ಸ್ ಕೇಳುವ ಪದ್ಧತಿ ಕಡಿಮೆಯಾಗಲಿದೆ. ಯುವಕರು ಮತ್ತು ವಲಸೆ ಕುಟುಂಬಗಳಿಗೆ ಬಾಡಿಗೆ ಮನೆ ಪಡೆಯುವುದು ಸುಲಭವಾಗಲಿದೆ. ಕರ್ನಾಟಕ ಸರ್ಕಾರ ಅನುಮೋದಿಸಿದರೆ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆ ಸಂಭವಿಸಲು ಸಾಧ್ಯ.
ಮುಂಬೈ:
ಆತೀ ದುಬಾರಿ ಅಡ್ವಾನ್ಸ್ ಮತ್ತು ‘ಪಗಡಿ’ ಪದ್ಧತಿಗೆ ನಿಯಂತ್ರಣ. ಬಾಡಿಗೆಯ ಪೊಲೀಸ್ ಪರಿಶೀಲನೆ ಕಡ್ಡಾಯವಾಗಿರುವುದರಿಂದ ಎರಡೂ ಪಕ್ಷಗಳಿಗೂ ಭದ್ರತೆ.
6. ವಿವಾದಗಳಿಗೆ ತ್ವರಿತ ಪರಿಹಾರ
ವರ್ಷಗಟ್ಟಲೆ ಕೋರ್ಟ್ ಅಲೆದಾಡುವ ಅವಶ್ಯಕತೆ ಇಲ್ಲ.
ಹೊಸ ಕಾಯ್ದೆ ಅಡಿ ‘ಬಾಡಿಗೆ ನ್ಯಾಯಮಂಡಳಿ’ (Rent Tribunal) ರಚನೆಗೆ ತೀರ್ಮಾನ.
-
ದೂರು ದಾಖಲಾದ 60 ದಿನಗಳೊಳಗೆ ತೀರ್ಪು ನೀಡುವುದು ಕಡ್ಡಾಯ.
ಹೊಸ ಕಾಯ್ದೆಯ ಜಾರಿಗೆ ದೇಶಾದ್ಯಂತ ಬಾಡಿಗೆದಾರರು–ಮಾಲೀಕರ ನಡುವೆ ಪಾರದರ್ಶಕತೆ ಹಾಗೂ ಭದ್ರತೆ ಹೆಚ್ಚಲಿದ್ದು, ಮೆಟ್ರೋ ನಗರಗಳಲ್ಲಿ ಬಾಡಿಗೆದಾರರಿಗೆ ಇದು ನಿಜಕ್ಕೂ ‘ಗುಡ್ ನ್ಯೂಸ್’ ಎನ್ನಲಾಗಿದೆ.
