ಸರ್ಕಾರಿ ನೌಕರರಿಗೆ ‘ಏಕೀಕೃತ ಪಿಂಚಣಿ ಯೋಜನೆ’ : ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ
ಕೇಂದ್ರ ಸರ್ಕಾರಿ ನೌಕರರಿಗೆ ಈಜುನ್ 30, 2025ರ ಒಳಗೆ ಹೊಸ ಏಕೀಕೃತ ಪಿಂಚಣಿ ಯೋಜನೆ (UPS) ಆಯ್ಕೆ ಮಾಡುವ ಅವಕಾಶವಿದೆ. ಈ ಯೋಜನೆ ಏಪ್ರಿಲ್ 1, 2025ರಿಂದ ಜಾರಿಗೆ ಬರುವುದಾಗಿದ್ದು, ನಿವೃತ್ತಿಯ ನಂತರ ಖಚಿತ ಮಾಸಿಕ ಪಿಂಚಣಿ ನೀಡುವುದನ್ನು ಗುರಿಯಾಗಿ ಹೊಂದಿದೆ. UPS ಅಡಿಯಲ್ಲಿ, ಕನಿಷ್ಠ 25 ವರ್ಷಗಳ ಸೇವೆಯಿರುವ ಉದ್ಯೋಗಿಗಳಿಗೆ ನಿವೃತ್ತಿಯ ಪೂರ್ವ 12 ತಿಂಗಳ ಸರಾಸರಿ ವೇತನದ 50% ಪಿಂಚಣಿಯಾಗಿ ಖಾತರಿಯಾಗುತ್ತದೆ. 10 ವರ್ಷಗಳ ಸೇವೆ ಪೂರೈಸಿದವರಿಗೆ ಕನಿಷ್ಠ ₹10,000 ಪಿಂಚಣಿಯ ಭರವಸೆ ಇದೆ. ಮೃತ ಉದ್ಯೋಗಿಗಳ ಕುಟುಂಬಗಳಿಗೆ ಕೊನೆಯ ಪಿಂಚಣಿಯ 60% ಕುಟುಂಬ ಪಿಂಚಣಿ ರೂಪದಲ್ಲಿ ಪಾವತಿಸಲಾಗುತ್ತದೆ. ಯೋಜನೆಯು ಕೇಂದ್ರ ಸರ್ಕಾರಿ ನೌಕರರಿಗೆ ಹೆಚ್ಚಿನ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ.
Copy and paste this URL into your WordPress site to embed
Copy and paste this code into your site to embed