ಹನ್ಯಾಳಿ : ಮಕ್ಕಳ ಮನೆ, ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಾಲಾ ವಾರ್ಷಿಕೋತ್ಸವ ಜಂಟಿಯಾಗಿ ತುಂಬಾ ಅದ್ದೂರಿಯಾಗಿ ಮೂಡಿ ಬಂದಿತು. ಶಾಲಾ ಮಕ್ಕಳಲ್ಲಿ ಅಡಗಿದ್ದ ಸುಪ್ತ ಪ್ರತಿಭೆಯನ್ನು ಅನಾವರಣ ಮಾಡುವ ಸಲುವಾಗಿ ಹಿರಿಯ ವಿದ್ಯಾರ್ಥಿಗಳ ಬಳಗ ಹನ್ಯಾಳು ಈ ಕಾರ್ಯಕ್ರಮದ ಮುಖ್ಯ ಆಯೋಜಕರಾಗಿದ್ದು ಹನ್ಯಾಳು ಗ್ರಾಮದ ಮಾಜೀ ನೀರಾವರಿ ಮಂತ್ರಿಗಳಾಗಿದ್ದ ದಿ.ಎಚ್ ಎನ್ ನಂಜೇಗೌಡರ ಸ್ಮರಣಾರ್ಥವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀಮತಿ ತಾರಾ ಎ ಮಂಜು, ಮಕ್ಕಳ ಮನೆ ಸಂಸ್ಥಾಪಕರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಹೆಚ್ ಎಸ್ ಶಂಕರ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಭವ್ಯವಾದ ವೇದಿಕೆ ನಿರ್ಮಿಸಲು ಸಹಕಾರ ನೀಡಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ಹನ್ಯಾಳು ಗ್ರಾಮಸ್ಥರಾದ ನಂದೀಶ್ ಎಚ್ ಆರ್, ಅನುವಿಜಯ್, ಸುಹಾಸ್, ಮಂಜುನಾಯಕ್, ರಾಘವೇಂದ್ರ, ಉದಯ್ ಮತ್ತು ಶಾಂತರಾಜು ಶುಂಠಿ ಬೆಳೆಗಾರರು, ರವಿಕುಮಾರ್, ಸತ್ಯಣ್ಣ , ಚಿದಾನಂದ್ ಮುಂತಾದವರು ಕಾರ್ಯಕ್ರಮದ ದಾನಿಗಳಾಗಿ ಸಹಕಾರ ನೀಡಿದ್ದರು.

ಹನ್ಯಾಳು ಗ್ರಾಮದ ಹಿರಿಯ ವಿದ್ಯಾರ್ಥಿ ದೀಪಕ್ ಹೆಚ್ ಎಲ್ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ಹಾಸನ ಜಿಲ್ಲೆಯ ಲೆಕ್ಕಪರಿಶೋಧಕ ಇಲಾಖೆ ಹಿರಿಯ ಉಪನಿರ್ದೇಶಕರಾದ ಡಾ.ಅಶೋಕ್ ರವರು ಶೈಕ್ಷಣಿಕ ವಾಗಿ ಮಕ್ಕಳ ಶಿಕ್ಷಣದ ಉತ್ತೇಜನ ನೀಡುವ ಸಲುವಾಗಿ ಆಕರ್ಷಕ ಬಹುಮಾನವನ್ನು ಮಕ್ಕಳಿಗೆ ವಿತರಿಸಿದರು.
ಹನ್ಯಾಳು ಗ್ರಾಮದ ಹೆಸರಾಂತ ಕಲಾವಿದರಾದ ಹೆಚ್ ಎಸ್ ಗೋವಿಂದೇಗೌಡರ ರಂಗರತ್ನಾಕರ ಕಲಾತಂಡದಿಂದ ರಂಗಗೀತೆಗಳು ಮತ್ತು ರಂಗ ದೃಶ್ಯಗಳ ಕಾರ್ಯಕ್ರಮ ನಡೆದಿದ್ದು ನೋಡುಗರಿಗೆ ಉತ್ತಮ ಮನರಂಜನೆ ನೀಡಿತು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಶರಣ ಎಂ.ಎನ್. ಕುಮಾಸ್ವಾಮಿ ಅವರು ಆಯೋಜಿಸಿದ್ದ ವಚನ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ವಚನ ಪುಸ್ತಕಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತು ಯುವ ಘಟಕದ ಪ್ರಧಾನ ಕಾರ್ಯದರ್ಶಿ ಅರ್.ಕೆ. ಶ್ರೀನಿವಾಸ್, ಶಾಲಾ ಮುಖ್ಯ ಶಿಕ್ಷಕರಾದ ಕೆ ಎನ್ ರವಿಕುಮಾರ್, ಮಂಜುನಾಥ್, ಶಿಕ್ಷಕರಾದ ಗೀತಾ, ಸಂತೋಷ್ ಮಂಜುಳ, ನಂದಿನಿ, ಪ್ರತಿಭಾ, ಯತೀಶ್, ಕುಮಾರ್, ನವೀನ್ ನಿವೃತ್ತ ಶಿಕ್ಷಕರಾದ ಕಾಳಬೋಯಿ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಸಣ್ಣಸ್ವಾಮಿ, ಪವನ್ ಮತ್ತು ಸದಸ್ಯರು ಉಪಸ್ಥಿತರಿದ್ದರು.ಪೋಷಕ ವರ್ಗದವರು, ವಿದ್ಯಾರ್ಥಿಗಳು ಸುತ್ತಮುತ್ತಲಿನ ಗ್ರಾಮಸ್ಥರು ನೆರೆದಿದ್ದರು.
ವರದಿ : ಕುಮಾರಸ್ವಾಮಿ
