ವಾಷಿಂಗ್ಟನ್: ರಶ್ಯಾ ವಿರುದ್ಧ ಆರ್ಥಿಕ ದಿಗ್ಬಂಧನ ವಿಧಿಸುವ ಉದ್ದೇಶದ ‘ಸ್ಯಾಂಕ್ಷನಿಂಗ್ ರಶ್ಯಾ ಆಕ್ಟ್ ಆಫ್ 2025’ ಎಂಬ ಮಸೂದೆಯನ್ನು ಅಮೆರಿಕದ ಸೆನೆಟ್ನಲ್ಲಿ ಪ್ರಭಾವಿ ಸದಸ್ಯ ಲಿಂಡ್ಸೆ ಗ್ರಹಾಂ ಅವರು ಪ್ರಸ್ತಾವಿಸಿದ್ದು, ಇದರಿಂದ ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ಗಂಭೀರ ಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಈ ಮಸೂದೆಯ ಪ್ರಕಾರ, ಮಾಸ್ಕೋ ಜತೆ ವ್ಯಾಪಾರ ವಹಿವಾಟು ನಡೆಸುವ ರಾಷ್ಟ್ರಗಳು, ವಿಶೇಷವಾಗಿ ತೈಲ, ಅನಿಲ, ಯುರೇನಿಯಂ ಮತ್ತು ಇತರೆ ಉತ್ಪನ್ನಗಳನ್ನು ರಶ್ಯಾದಿಂದ ಖರೀದಿಸುವ ದೇಶಗಳ ಸರಕು-ಸೇವೆಗಳ ರಫ್ತಿಗೆ ಹೆಚ್ಚಿನ ಸುಂಕ ವಿಧಿಸಲಾಗುತ್ತದೆ. ಜೊತೆಗೆ ರಶ್ಯನ್ ಉದ್ಯಮಗಳು, ಸರ್ಕಾರಿ ಸಂಸ್ಥೆಗಳು ಮತ್ತು ನೀತಿ ನಿರ್ಣಯಕರ ಮೇಲೂ ನಿರ್ಬಂಧ ಹೇರಲು ಈ ಮಸೂದೆ ಯತ್ನಿಸುತ್ತಿದೆ.
ಇದನ್ನು ಓದಿ: Israel-Iran War: ಟ್ರಂಪ್ ಜೊತೆ ಸಮನ್ವಯದಿಂದ ಕದನ ವಿರಾಮವನ್ನು ಒಪ್ಪಿಕೊಂಡ ಇಸ್ರೇಲ್
84 ಸೆನೆಟರ್ಗಳ ಬೆಂಬಲವನ್ನು ಹೊಂದಿರುವ ಈ ಮಸೂದೆ ಜಾರಿಯಾದರೆ, ಉಕ್ರೇನ್ ಮೇಲೆ ನಡೆದ ರಶ್ಯಾದ ಕ್ರೂರ ದಾಳಿಗೆ ತೀಕ್ಷ್ಣ ಪ್ರತಿಕ್ರಿಯೆ ಎನಿಸಲಿದೆ ಎಂದು ಲಿಂಡ್ಸೆ ಗ್ರಹಾಂ ತಿಳಿಸಿದ್ದಾರೆ. “ಈ ಮಸೂದೆ ಭಾರತ, ರಶ್ಯಾ ಮತ್ತು ಚೀನಾಗೆ ಬಂಕರ್ ಬಸ್ಟರ್ ಆಗಲಿದೆ” ಎಂಬ ಹೇಳಿಕೆಯಿಂದ ಅವರು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
ಭಾರತದ ತೈಲ ಆಮದು ಮೇಲೆ ಹೊರೆ:
ರಶ್ಯಾದಿಂದ ತೈಲ ಆಮದು ಮಾಡುವ ರಾಷ್ಟ್ರಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದು, 2025ರ ಮೇ ತಿಂಗಳಲ್ಲಿ ಮಾತ್ರ 4.2 ಶತಕೋಟಿ ಪೌಂಡ್ನ ಮೌಲ್ಯದ ಕಚ್ಚಾ ತೈಲವನ್ನು ಖರೀದಿಸಿದ್ದು, ಇದರಲ್ಲಿ ಶೇಕಡಾ 72 ರಷ್ಟು ಕಚ್ಚಾತೈಲವಿತ್ತು. ಈ ನಿಟ್ಟಿನಲ್ಲಿ, ಈ ಮಸೂದೆಯ ಅನುಮೋದನೆ ಭಾರತಕ್ಕೆ ಆರ್ಥಿಕವಾಗಿ ಬಿಕ್ಕಟ್ಟಿನ ಕಾರಣವಾಗಬಹುದು ಎಂಬ ಆತಂಕ ಉಂಟಾಗಿದೆ.

[…] ಇದನ್ನೂ ಓದಿ: – ಅಮೆರಿಕದ ‘ರಷ್ಯಾ ನಿರ್ಬಂಧ… […]