ತುಮಕೂರು: ವೀರಶೈವ ಉಚಿತ ವೈದ್ಯಕೀಯ ಸೇವಾ ಕೇಂದ್ರದ ವತಿಯಿಂದ ಇತ್ತೀಚಿಗೆ ತುಮಕೂರು ನಗರ ವೀರೇಶೈವ ಸಮಾಜದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೋರಿಮಂಜಣ್ಣ ಹಾಗೂ ಕರ್ನಾಟಕ ಫಿಲಂ ಚೇಂಬರ್ ನ ನಿರ್ದೇಶಕರಾಗಿ ಸತತ 15 ನೇ ಬಾರಿ ಚುನಾಯಿತರಾದ ತುಮಕೂರು ವೀರಶೈವ ಬ್ಯಾಂಕಿನ ಅಧ್ಯಕ್ಷರು ಮತ್ತು ಗಾಯಿತ್ರಿ ಚಿತ್ರಮಂದಿರದ ಪಾಲುದಾರರಾದ ಕೆ.ಜೆ.ರುದ್ರಪ್ಪ ರವರುಗಳನ್ನು ವೀರಶೈವ ಉಚಿತ ವೈದ್ಯಕೀಯ ಸೇವಾ ಸಮಿತಿಯಿಂದ ಗೌರವಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಅರ್ಜುನ್.ಎಂ , ಉಪಾಧ್ಯಕ್ಷರಾದ ಟಿ.ಜೆ.ಗಿರೀಶ್ , ಕಾರ್ಯದರ್ಶಿ ರವಿಶಂಕರ್, ಖಜಾಂಚಿ ಸುಮಾಪ್ರಸನ್ನ,ತುಮಕೂರು ವೀರಶೈವ ಬ್ಯಾಂಕಿನ ಉಪಾಧ್ಯಕ್ಷರಾದ ಕೆ.ಮಲ್ಲಿಕಾರ್ಜುನ,ವೀರಶೈವ ಸಮಾಜದ ಖಜಾಂಚಿಗಳಾದ ಜಿ.ಕೆ.ಸ್ವಾಮಿ,ವೈದ್ಯಕೀಯ ಸೇವಾ ಸಮಿತಿಯ ನಿರ್ದೇಶಕರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.
– ಕೆ.ಬಿ.ಚಂದ್ರಚೂಡ

[…] […]