ನಿತ್ಯ ಜೀವನಕ್ಕೆ ಶ್ಲೋಕ ಪಾಠ: ಭಗವದ್ಗೀತೆ ಮೂಲಕ ಆತ್ಮಬೋಧನೆ

“ನಿಯತಮ್ ಕುರು ಕರ್ಮ ತ್ವಮ್…” ಎಂಬ ಶ್ಲೋಕದ ಮೂಲಕ ಭಗವಾನ್ ಕೃಷ್ಣ ಅರ್ಜುನನಿಗೆ ಮಾತ್ರವಲ್ಲದೆ ಎಲ್ಲರಿಗೂ ಒಂದೇ ಮಹತ್ವದ ಪಾಠವನ್ನು ನೀಡುತ್ತಾನೆ: ಜ್ಞಾನಕ್ಕೆ ಪೂರಕವಾದ, ನಿಷ್ಠೆಯಿಂದ ಮಾಡಿದ ನಿಯತ ಕರ್ಮವೇ ಯೋಗದ ಮೂಲ. ನಿಷ್ಕ್ರೀಯತೆಯ ಮೌನದಂತ ತಪಸ್ಸಿಲ್ಲ, ಕರ್ಮವೆಂಬ ಕಿರಣವೇ ಆತ್ಮಜ್ಯೋತಿಯ ದಾರಿ.