ವಿಕ್ರಮ್ ಸಂಪತ್ ಅವರ ‘ಯುವ’ ಪುಸ್ತಕ ಸರಣಿ 6 ಭಾಷೆಗಳಲ್ಲಿ ಬಿಡುಗಡೆ – ಇತಿಹಾಸ ಸಂಶೋಧನೆಗೆ ನವ ದೃಷ್ಟಿಕೋನ

ಡಾ. ವಿಕ್ರಮ್ ಸಂಪತ್ ಅವರ ನೇತೃತ್ವದ ‘ಯುವ’ ಸರಣಿಯು 6 ಭಾಷೆಗಳಲ್ಲಿ ಒಂದೇ ಸಮಯದಲ್ಲಿ ಬಿಡುಗಡೆಗೊಳ್ಳಲಿದೆ. ಈ ಪ್ರಯತ್ನವು ಮಕ್ಕಳಿಗೆ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ಕುರಿತು ಜಾಗೃತಿ ಮೂಡಿಸುವ ಗುರಿ ಹೊಂದಿದೆ. ಕಾರ್ಯಕ್ರಮದಲ್ಲಿ ಸುಧಾ ಮೂರ್ತಿ, ಯದುವೀರ್ ಒಡೆಯರ್, ಮಧುಸೂದನ್ ಸಾಯಿ ಉಪಸ್ಥಿತರಿರಲಿದ್ದಾರೆ.