ಇರಾನ್ ದಾಳಿ ವಿರೋಧಿಸಿ ಪಾಕಿಸ್ತಾನದಲ್ಲಿ ಹಿಂಸಾಚಾರ: ಗಿಲ್ಗಿಟ್–ಬಾಲ್ಟಿಸ್ತಾನದಲ್ಲಿ ಸೇನೆ ನಿಯೋಜನೆ, ಕರ್ಫ್ಯೂ ಜಾರಿ

ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ದಾಳಿಯನ್ನು ಖಂಡಿಸಿ ಪಾಕಿಸ್ತಾನದಲ್ಲಿ ಭುಗಿಲೆದ್ದ ಪ್ರತಿಭಟನೆಗಳು ಹಿಂಸಾತ್ಮಕ ತಿರುವು ಪಡೆದಿವೆ. ಗಿಲ್ಗಿಟ್–ಬಾಲ್ಟಿಸ್ತಾನದಲ್ಲಿ ಸೇನೆ ನಿಯೋಜನೆ ಹಾಗೂ ಸ್ಕರ್ದುನಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ವಿವಿಧ ಘರ್ಷಣೆಗಳಲ್ಲಿ 26 ಮಂದಿ ಸಾವಿಗೀಡಾಗಿದ್ದಾರೆ.