ಹಾಸನ, ಆಗಸ್ಟ್ 24: ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಉದ್ದೇಶದಿಂದ ‘ಪರಿಸರಕ್ಕಾಗಿ ನಡಿಗೆ’ ಕಾರ್ಯಕ್ರಮವನ್ನು ಭಾನುವಾರ ಹಾಸನದಲ್ಲಿ ಆಯೋಜಿಸಲಾಯಿತು. ಬೆಳಿಗ್ಗೆ 7 ಗಂಟೆಗೆ ಎಸ್.ಎಂ. ಕೃಷ್ಣ ನಗರದ ಮುಖ್ಯ ಪ್ರವೇಶ ದ್ವಾರದಿಂದ ಪ್ರಾರಂಭವಾದ ಈ ನಡಿಗೆಯಲ್ಲಿ 350ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು.
ಈ ಕಾರ್ಯಕ್ರಮವನ್ನು ‘ಪರಿಸರಕ್ಕಾಗಿ ನಾವು’ ಸಂಘಟನೆಯು ರೋಟರಿ ಕ್ಲಬ್ ಆಫ್ ಹಾಸನ್ ಸನ್ರೈಸ್ ಹಾಗೂ ರೋಟರಿ ಕ್ಲಬ್ ಆಫ್ ಹಾಸನ್ ಮಿಡ್ ಟೌನ್ ಸಹಯೋಗದಲ್ಲಿ ಆಯೋಜಿಸಿತ್ತು.

ಪ್ರಮುಖರ ಹಾಜರಾತಿ:-
ಪರಿಸರಕ್ಕಾಗಿ ನಾವು ಸಂಘಟನೆಯ ರಾಜ್ಯಾಧ್ಯಕ್ಷ ಶ್ರೀ ಇಟಿ ರಾಮಸ್ವಾಮಿ, ಜಿಲ್ಲಾಧ್ಯಕ್ಷ ಯೋಗೇಂದ್ರಪ್ಪ, ಆದಿಚುಂಚನಗಿರಿ, ಪುಷ್ಪಗಿರಿ ಹಾಗೂ ತಣ್ಣೀರುಹಳ್ಳ ಮಠದ ಪೂಜ್ಯ ಸ್ವಾಮೀಜಿಗಳು, ರೋಟರಿ ಕ್ಲಬ್ ಡಿಸ್ಟ್ರಿಕ್ಟ್ 3182ರ ಅಸಿಸ್ಟೆಂಟ್ ಗವರ್ನರ್ ರೋ. ಜೆ. ಎನ್. ಮಂಜುನಾಥ್, ರೋಟರಿ ಕ್ಲಬ್ ಸನ್ರೈಸ್ ಅಧ್ಯಕ್ಷ ರೋ. ವಜ್ರ ಕುಮಾರ್ ಎಚ್.ಡಿ., ಕಾರ್ಯದರ್ಶಿ ರೋ. ಯೋಗೇಶ್ ಕೆ.ಎಸ್., ಉಪಾಧ್ಯಕ್ಷ ರೋ. ಮಂಜುನಾಥ್, ನಿರ್ದೇಶಕರು ಹಾಗೂ ಹಲವಾರು ಸದಸ್ಯರು ಹಾಜರಿದ್ದರು.
ಅದೇ ರೀತಿ, ರೋಟರಿ ಕ್ಲಬ್ ಮಿಡ್ ಟೌನ್ ಅಧ್ಯಕ್ಷ ರೋ. ಸಿದ್ದೇಶ್ವರ, ಕಾರ್ಯದರ್ಶಿ ರೋ. ಅರುಣ್ ನಾಮೈಗೌಡ್ರು ಸೇರಿದಂತೆ ಹಲವಾರು ಸದಸ್ಯರು ಪಾಲ್ಗೊಂಡಿದ್ದರು. ರೋಟರಿ ಸನ್ರೈಸ್ ಗೌರವ ಸದಸ್ಯ ಶ್ರೀ ವಿಜಯ್ ಅಂಗಡಿ ಕೂಡ ಹಾಜರಿದ್ದರು.

ಜಾಗೃತಿ ಸಂದೇಶ:-
ಸುಮಾರು ಮೂರು ಕಿಲೋಮೀಟರ್ ನಡಿಗೆಯ ಮೂಲಕ, ಪರಿಸರದ ಹಾನಿಕಾರಕ ಪರಿಣಾಮಗಳನ್ನು ಜನತೆಗೆ ತಿಳಿಸುವ ಜೊತೆಗೆ, ಪರಿಸರ ಕಾಪಾಡುವ ಕಾಳಜಿಯನ್ನು ಬೆಳೆಸುವ ಅಗತ್ಯವನ್ನು ಪ್ರತಿೊಬ್ಬರೂ ಮನವರಿಕೆ ಮಾಡಿಸಿದರು.
ಸಹಕಾರ:-
ಈ ನಡಿಗೆಯಲ್ಲಿ ಜಿಲ್ಲಾ ಆಡಳಿತ, ಶಿಕ್ಷಣ ಸಂಸ್ಥೆಗಳು, ವಿವಿಧ ಸಂಘ-ಸಂಸ್ಥೆಗಳು, ಪರಿಸರ ಪ್ರೇಮಿಗಳು ಹಾಗೂ ನಾಗರಿಕರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮಕ್ಕೆ ಯಶಸ್ಸು ತಂದರು.
ಇಂಡಿಯನ್ ಆಯಿಲ್ ಮತ್ತು ಏರ್ ಇಂಡಿಯಾ – ಸುಸ್ಥಿರ ವಾಯುಯಾನ ಇಂಧನ (SAF) ಪೂರೈಕೆಗಾಗಿ MoU ಸಹಿ
