ವಾಷಿಂಗ್ಟನ್- ಅಮೆರಿಕ ವೀಸಾ now stricter- ಸಾಮಾಜಿಕ ಮಾಧ್ಯಮ ಖಾತೆಗಳ ವಿವರ ಕಡ್ಡಾಯ!

ಅಮೆರಿಕ ವೀಸಾ ಬಯಸುವ ಎಲ್ಲಾ ಅರ್ಜಿದಾರರು ಇನ್ನುಮುಂದೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ವಿವರಗಳನ್ನು ಕಡ್ಡಾಯವಾಗಿ ನೀಡಬೇಕು. ಟ್ರಂಪ್ ಆಡಳಿತದ ‘ಎಕ್ಸ್ಟ್ರೀಂ ವೆಟ್ಟಿಂಗ್’ ನೀತಿಯಡಿಯಲ್ಲಿ ಈ ಹೊಸ ನಿಯಮ ಜಾರಿಗೊಂಡಿದೆ. DS-160 ಫಾರ್ಮ್‌ನಲ್ಲಿ ಕಳೆದ ಐದು ವರ್ಷಗಳ ಸಾಮಾಜಿಕ ಮಾಧ್ಯಮ ಬಳಕೆಯ ವಿವರಗಳನ್ನು ಹಂಚಿಕೊಳ್ಳುವುದು ಇದೀಗ ಅನಿವಾರ್ಯವಾಗಿದೆ. ಸುಳ್ಳು ಮಾಹಿತಿ ನೀಡುವುದು ಅಥವಾ ಖಾತೆಗಳನ್ನು ಮರೆಮಾಚುವುದು ವೀಸಾ ನಿರಾಕರಣೆಗೆ ಕಾರಣವಾಗಬಹುದು.