ಟಿ.ನರಸೀಪುರ– ರಾಜ್ಯ ಹಾಗೂ ಜನರ ಅಭಿವೃದ್ಧಿ ನೋಡಿ ಬಿಜೆಪಿಯವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ.ಹಾಗಾಗಿ ಏನಾದರೊಂದು ವಿಷಯ ಮುಂದಿಟ್ಚು ಟೀಕೆ ಮಾಡುವುದರಲ್ಲಿ ನಿಸ್ಸೀಮರು.ಖಜಾನೆಯಲ್ಲಿ ಹಣ ವಿಲ್ಲದಿದ್ದರೆ ಇಡೀ ರಾಜ್ಯದ ಎಲ್ಲಾ ವಿಧಾನ ಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲು ಸಾಧ್ಯವಾಗುತ್ತಿತ್ತೇ…?
ಸಾಧನಾ ಸಮಾವೇಶಕ್ಕಾಗಿ ಮುಖ್ಯಮಂತ್ರಿಗಳು ಸೇರಿದಂತೆ ಮಂತ್ರಿ ಮಂಡಲ ಹಾಜರಿದ್ದು ಕಾಂಗ್ರೆಸ್ ಪಕ್ಷವು ಸದಾಕಾಲ ಜನರ ಹಾಗೂ ರಾಜ್ಯದ ಅಭಿವೃದ್ಧಿ ಪರವಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಸಮಾವೇಶದಲ್ಲಿ ತಿಳಿಸಲಾಗುತ್ತದೆ.
ಇದನ್ನು ಓದಿ: ಟಿ.ನರಸೀಪುರ : “ಅಂತ್ಯಕ್ರಿಯೆ ವರದಿಯಲ್ಲಿ ಜಾತಿ ಉಲ್ಲೇಖ ಬೇಡ” – ದಸಂಸ ಜಿಲ್ಲಾ ಸಂಚಾಲಕ ಉಮಾಮಹದೇವ್ ಆಗ್ರ
ಇದನ್ನು ಸಹಿಸಿಕೊಳ್ಳಲಾಗದ ಬಿಜೆಪಿಯವರು ಕಾಲೆಳೆಯುವ ಕೆಲಸ ಮಾಡುತ್ತಿದ್ದು ಇದು ಅವರಿಗೆ ಕರಗತವಾಗಿಬಿಟ್ಟಿದೆ ಎಂದು ಚಾಮರಾಜನಗರ ಲೋಕಸಭಾ ಸದಸ್ಯ ಸುನಿಲ್ ಬೋಸ್ ತಿಳಿಸಿದರು.
- ಎಂ.ನಾಗೇಂದ್ರ ಕುಮಾರ್

[…] ಇದನ್ನು ಓದಿ: Watch Video:- ಟಿ.ನರಸೀಪುರ: ರಾಜ್ಯದ ಸಾಧನೆಗೆ ಭಿತಿಗ… […]