ಕೆ.ಆರ್.ಪೇಟೆ-ತಾಲೂಕಿನ ಕಿಕ್ಕೇರಿ ಹೋಬಳಿಯ ಲಿಂಗಪುರ ಗ್ರಾಮದ ಬಳಿ ಇರುವ ಹೇಮಾವತಿ ಬಲದಂಡೆ ಸಿಳು ಕಾಲುವೆಯಲ್ಲಿ *ಹಲವಾರು ವರ್ಷಗಳಿಂದ ನಾಲೆಯಲ್ಲಿ ನೀರು ಹೋಗಲಾಗದಷ್ಟು ನಾಲೆ ಉದ್ದಕ್ಕೂ ಗಿಡಗಂಟಿಗಳು ಬೆಳೆದು ನಾಲೆಯಲ್ಲಿ ಹೋಗಬೇಕಿದ್ದ ನೀರು.ನಾಲೆ ಏರಿ ಮೇಲೆ ಹರಿದು ಮಾಕವಳ್ಳಿ ಸಂತೋಷ್ ಎಂಬುವರ ಒಂದು ಎಕರೆಯಲ್ಲಿರುವ ಮೂರು ತಿಂಗಳ ಕಬ್ಬಿನ ಫಸಲು ಸೇರಿದಂತೆ ಅಕ್ಕ ಪಕ್ಕದ ರೈತರು ಬೆಳೆದ ರಾಗಿ,ಭತ್ತ ಬೆಳೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ಬಳಿಕ ರೈತ ಸಂತೋಷ್ ಮಾತನಾಡಿ ಈ ಸೀಳುಗಾಲವೆ ಈ ಭಾಗದ ರೈತ ಜೀವನಾಡಿಯಾಗಿದೆ ಆದರೆ ಹೇಮಾವತಿ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಹಲವು ವರ್ಷಗಳಿಂದ ಕಾಲುವೆಯ ಒಳಭಾಗದಲ್ಲಿರುವ ಗಿಡಗಂಟಿಗನ್ನ ಸ್ವಚ್ಛಗೊಳಿಸದೆ ಹಿನ್ನೆಲೆ ನಾಲೆ ಯಲ್ಲಿ ನೀರು ಹೋಗದೆ ನಾಲೆ ಏರಿ ಮೇಲೆ ಹರಿದು.ನಮ್ಮ ಕಬ್ಬಿನ ಬೆಳೆಯಿದ್ದ ಜಮೀನು ಸೇರಿದಂತೆ ಅಕ್ಕಪಕ್ಕದ ರೈತರ ಜಮೀನಿನ ಮೇಲೆ ಸತತ ಒಂದು ವಾರದಿಂದ ಹರಿಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಸಂಬಂಧಪಟ್ಟ ಹೇಮಾವತಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಚಂದ್ರೇಗೌಡರಿಗೆ ಮನವಿ ಮಾಡಿದರು ಕೂಡ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿ ನಾಲೆಯಲ್ಲಿ ಬೆಳೆದ ಜಂಗಲ್ ಕೂಡಲೆ ತೆರುವುಗೊಳಿಸಿ ಈ ಭಾಗದ ರೈತರಿಗೆ ಅನುಕೂಲ ಮಾಡಬೇಕು ಎಂದು ಆಗ್ರಹಿಸಿದರು.
– ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
