ಪ್ರತಿದಿನ ಬೆಳಗಿನ ಉಪಾಹಾರವು ನಮ್ಮ ದೇಹಕ್ಕಷ್ಟೇ ಅಲ್ಲ, ಮೆದುಳಿನ ಕಾರ್ಯಕ್ಷಮತೆಗೆ ಕೂಡ ಅಷ್ಟೇ ಮಹತ್ವದ್ದಾಗಿದೆ. ಸರಿಯಾದ ಬೆಳಗಿನ ಉಪಾಹಾರವನ್ನು ಆಯ್ಕೆ ಮಾಡಿಕೊಳ್ಳುವುದು, ನಿಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು, ಬುದ್ಧಿವಂತಿಕೆಯನ್ನು ಚುರುಕುಗೊಳಿಸಲು ಮತ್ತು ದೈಹಿಕ-ಮಾನಸಿಕ ಶಕ್ತಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಓಟ್ಸ್ – ಶಕ್ತಿಯ ಭಂಡಾರ:-
ಬೆಳಗಿನ ಉಪಾಹಾರದಲ್ಲಿ ಓಟ್ಸ್ ಬಳಸುವುದು ಅತ್ಯುತ್ತಮ ಆಯ್ಕೆ. ಇದರಲ್ಲಿ ಫೈಬರ್ ಮತ್ತು ಶಕ್ತಿವರ್ಧಕ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಓಟ್ಸ್ ಸೇವನೆಯಿಂದ ಮೆದುಳಿಗೆ ಸ್ಥಿರ ಶಕ್ತಿ ಲಭಿಸುತ್ತದೆ ಮತ್ತು ದಿನವಿಡೀ ಸಜೀವತೆಯಿಂದ ಇರುತ್ತೀರಿ. ದೈಹಿಕ ಶಕ್ತಿಯ ಜೊತೆಗೆ ಮಾನಸಿಕ ಚೈತನ್ಯವನ್ನೂ ಇದು ಒದಗಿಸುತ್ತದೆ. ಆರೋಗ್ಯಕರ ಜೀವನಶೈಲಿಗೆ ಓಟ್ಸ್ ಒಂದು ಸುರಕ್ಷಿತ ಹಾದಿ.
ಆವಕಾಡೊ – ಮೆದುಳಿನ ಸ್ನೇಹಿತ:-
ಆವಕಾಡೊಗಳು ರಕ್ತದ ಪ್ರವಾಹವನ್ನು ಸುಧಾರಿಸುತ್ತವೆ ಮತ್ತು ಮೆದುಳಿಗೆ ಅಗತ್ಯವಾದ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ತಲುಪಿಸುವಲ್ಲಿ ಮುಖ್ಯ ಪಾತ್ರವಹಿಸುತ್ತವೆ. ತ್ವರಿತ ಯೋಚನೆ, ಜ್ಞಾಪಕ ಶಕ್ತಿ ಹೆಚ್ಚಳ, ತೀವ್ರ ಗಮನ ಶಕ್ತಿ ಇವೆಲ್ಲಕ್ಕೂ ಆವಕಾಡೊ ಉತ್ತಮ ಪೂರಕ. ಇದನ್ನು ಉಪಾಹಾರದಲ್ಲೇ ಅಲ್ಲದೆ, ಸ್ನ್ಯಾಕ್ ರೂಪದಲ್ಲಿಯೂ ಬಳಸಬಹುದು.
ಬೆಳಗಿನ ಉಪಾಹಾರ ಎಂದರೆ ಹಸಿವಿನ ತಣಿವಲ್ಲ; ಅದು ದಿನದ ಮೊದಲ ಹಂತದಲ್ಲಿ ದೇಹ ಮತ್ತು ಮನಸ್ಸಿಗೆ ನೀಡುವ ಇಂಧನ. ಆರೋಗ್ಯಪೂರ್ಣ ಬೆಳಗಿನ ತಿಂಡಿಯ ಆಯ್ಕೆ, ನಿಮ್ಮ ದಿನವನ್ನು ಹೆಚ್ಚು ಸಕ್ರಿಯ, ಉತ್ಸಾಹಭರಿತ ಮತ್ತು ಯಶಸ್ವಿಯಾಗಿ ನಡೆಸುವ ಮೂಲ ಅಸ್ತ್ರವಾಗಿದೆ. ಹೀಗಾಗಿ, ದಿನದ ಪ್ರಾರಂಭವನ್ನು ಓಟ್ಸ್ ಅಥವಾ ಆವಕಾಡೊ ಹೋಲಿದ ಪೋಷಕಾಂಶಯುಕ್ತ ಆಹಾರಗಳೊಂದಿಗೆ ಶುರುಮಾಡಿ – ನಿಮ್ಮ ಮೆದುಳು ಮತ್ತು ದೇಹ ಎರಡೂ ನಿಮಗೆ ಧನ್ಯವಾದ ಹೇಳುವುವು!
