ಗುರುಪೂರ್ಣಿಮೆ ಮಹತ್ವವೇನು ? ಇತಿಹಾಸವೇನು…???

ಅಶಾಢ ಪೌರ್ಣಿಮೆಯಂದು ಆಚರಿಸಲಾಗುವ ಗುರುಪೂರ್ಣಿಮೆ ಗುರುಗಳಿಗೆ ಗೌರವ ಸಲ್ಲಿಸುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಬ್ಬವಾಗಿದೆ. ವೇದವ್ಯಾಸರ ಜನ್ಮದಿನವನ್ನೂ ಹೊಂದಿರುವ ಈ ದಿನ, ಮಹಾಭಾರತ, ಪುರಾಣ, ಗೀತೆ ಹಾಗೂ ವೇದಾಂತ ತತ್ತ್ವಗಳ ಸ್ಮರಣೆಯೊಂದಿಗೆ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಅಮೂಲ್ಯ ಅವಕಾಶವಾಗಿದೆ.